ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Wednesday, July 15, 2009

ಸ್ತ್ರೀ ಆಂದೋಲನ

ಸ್ತ್ರೀ ಆಂದೋಲನ

ಶಿಕ್ಷಣ

+
ಜಾಗೃತಿ
+
ಸುರಕ್ಷತೆ
+
ಸಂಘಟನೆ
+
ಹೋರಾಟ
=
ಸಬಲೀಕರಣ

ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಮಹಿಳಯರ ಪರವಾಗಿ ಸರ್ಕಾರ ಹಾಗೂ ಸರ್ಕಾರರೇತರ ಹಲವಾರು ಸಂಘ,ಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದರೂ, ಹಲವಾರು ಕಾನೂನುಗಳನ್ನು ಜಾರಿಗೆ ತಂದಿದ್ದರೂ ಸಹ ದಿನ ನಿತ್ಯ ಮಾಧ್ಯಮಗಳಲ್ಲಿ,ದಿನಪತ್ರಿಕೆಗಳಲ್ಲಿ ಹೆಣ್ಣಿನ ಮೇಲೆ ನೆಡೆಯುತ್ತಿರುವ ಆಸಿಡ್ ಧಾಳಿ, ಅತ್ಯಾಚಾರ, ಭ್ರೂಣಹತ್ಯೆ, ಒಂಟಿ ಮಹಿಳೆ ಯರ ಕೊಲೆಗಳು ಇತ್ಯಾಧಿ ವಿಕೃತ ಗಳು ಹಾಗು ನಾಗರೀಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಘಟನೆಗಳು ಪ್ರಕಟವಾಗುತ್ತಿವೆ. ಈ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಣ್ಣು ಈ ಎಲ್ಲವೂಗಳನ್ನು ಎದುರಿಸಲು ಆಕೆಯನ್ನು ತರಬೇತಿಗೊಳಿಸಿ, ಜಾಗೃತಿಮೂಡಿಸಿ ತಳಮಟ್ಟದಿಂದ ಸಂಘಟಿಸುವ ಮೂಲಕ ಹೆಣ್ಣನ್ನು ಸಬಲೀಕರಿಸಲು ಈ ಆಂದೋಲನವನ್ನು ಆರಂಭಿಸಲಾಗಿದೆ.
ಈ ನಿಟ್ಟಿನಲ್ಲಿ....
ಗಾರ್ಮೆಂಟ್ಸ್ ಹಾಗೂ ರಿಲೆಯನ್ಸ್ ಫ್ರಶ್ಗಳಲ್ಲಿನ ಮಹಿಳಾ ಕಾರ್ಮಿಕರ ಬಗ್ಗೆ ಅಧ್ಯಯನ ನೆಡೆಸಲಾಯಿತು. ನಿರುದ್ಯೋಗಿ ಹೆಣ್ಣುಮಕ್ಕಳಿಗೆ ಹಲವಾರು ತರಬೇತಿ ಶಿಬಿರಗಳನ್ನು ಏರ್ಪಡಿಸಲಾಯಿತು. ವರದಕ್ಷಿಣೆ ಹಾಗೂ ಕಿರುಕುಳಗಳಿಗೆ ಒಳಗಾದ ಹೆಣ್ಣುಮಕ್ಕಳಿಗೆ ಕಾನೂನಿ ಸಲಹೆ ಹಾಗೂ ಸಹಕಾರ ನೀಡಲಾಯಿತು. ಹಲವು ಮಹಿಳಾ ಕಾಲೇಜುಗಳಲ್ಲಿನ ಹೆಣ್ಣುಮಕ್ಕಳನ್ನು ಸಂಘಟಿಸಿಲಾಗಿದೆ. ಮಹಿಳಾ ಸದಸ್ಯರನ್ನು 'ಮಹಿಳಾ ಅಧ್ಯಯನ ಕೇಂದ್ರ'ಗಳು ಹಾಗೂ ಮಹಿಳಾಪರ ಚಿಂತಕರ ಸಂಪರ್ಕ ಸಾಧಿಸಲಾಗುತ್ತಿದೆ.


ಆಂದೋಲನದ ಸಂಕ್ಷಿಪ್ತ ಧ್ಯೇಯ ಮತ್ತು ಉದ್ದೇಶಗಳು

ಮಹಿಳೆಯರಿಗೆ ಅಗತ್ಯವಾದ ಶಿಕ್ಷಣ ನೀಡುವುದು ತಜ್ಞರಿಂದ ಹಕ್ಕು ಮತ್ತು ಕಾನೂನಿನ ಬಗ್ಗೆ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುವುದು .ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡುವುದು. ಶಾಲಾ-ಕಾಲೇಜು ಮತ್ತು ಉದ್ಯೋಗದಲ್ಲಿರುವ ಮಹಿಳೆಯರನ್ನು ಗುಂಪುಗೊಳಿಸಿ ಸಂಘಟಿಸುವುದು. ಮಹಿಳೆಯರೊಡನೆ ನೆಡೆಯುವ ಅಸಭ್ಯವರ್ತನೆ, ಲೈಂಗಿಕ ಕಿರುಕುಳಗಳನ್ನುಹಾಗೂ ಶೋಷಣೆಗಳನ್ನು ವಿರೋಧಿಸುವುದು ಹಾಗು ಕಾನೂನಿನ ರೀತಿ ಕ್ರಮಕ್ಕೆ ಹೋರಾಟ ನೆಡೆಸುವುದು. ಹೆಣ್ಣಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ದೈಹಿಕ ದೃಢತೆಯ ಶಿಕ್ಷಣ ನೀಡುವುದು. ಆಕೆ ಎದುರಿಸುವ ಆರೋಗ್ಯದ ಸಮಸ್ಯೆಗಳ ಬಗ್ಗೆ ನುರಿತ ವೈದ್ಯರಿಂದ ಸಲಹೆ ಅರಿವು ಮೂಡಿಸುವುದು. ಆಧುನಿಕ ತಂತ್ರಜ್ಞಾನ,ಬೀದಿನಾಟಕಗಳ,ಸಾಕ್ಷ್ಯಚಿತ್ರಗಳ ಮೂಲಕ ಹಾಗೂ ಮಹಿಳಾಪರವಾದ ಲೇಖನ,ವಾರ್ತಾ ಪತ್ರ ,ಬರವಣಿಗೆಗಳನ್ನು ಪ್ರಕಟಿಸಿ ಆ ಮೂಲಕ ಜಾಗೃತಿ ಮೂಡಿಸುವುದು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿಚಾರ ಸಂಕೀರ್ಣಗಳು,ಚರ್ಚಿಸಿ,ಸಮ್ಮೇಳನ,ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
'ಆಂದೋಲನದ ಅಡಿಗಲ್ಲುಗಳ ಜೋಡಿಸೋಣ ಬನ್ನಿ '

1 comment:

  1. ಜನಪರ ಹೋರಾಟದ ಕಾರ್ಯಕ್ರಮಗಳು ತುಂಬಾ ಚೆನ್ನಾಗಿವೆ,

    ReplyDelete