Wednesday, June 1, 2011
Monday, July 5, 2010
By The Road Side
Tuesday, April 13, 2010
Mock Press Meet
ನಾವು ಒಂದಷ್ಟು ವರದಿ ಮಾಡುವುದು ಕಲಿತೆವು ಈಗ ಒಂದು ಘಟನೆ ಅಥವಾ ವರದಿ ಸುದ್ದಿಯಾಗುವುದು ಹೇಗೆ? ವರದಿಯನ್ನು ಹೇಗೆ ಸಂಪಾದಿಸುತ್ತಾರೆ? ಪತ್ರಿಕೆ ಕಛೇರಿಗಳಲ್ಲಿ ಹೇಗೆ ಅದು ಅಚ್ಚಾಗುತ್ತದೆ?
ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ವರದಿಗಾರರು ಪತ್ರಿಕಾಗೋಷ್ಠಿಗಳಲ್ಲಿ ಸುದ್ದಿಯನ್ನು ಸಂಗ್ರಹಿಸುವುದು ಗೊತ್ತಿತ್ತು. ಅಲ್ಲಿ ಮಾಧ್ಯಮದವರಿಗೆ ಹಾಗೂ ಪತ್ರಿಕಾಗೋಷ್ಠಿಯನ್ನು ನಡೆಸುವವರಿಗೆ ಮಾತ್ರ ಪ್ರವೇಶವೆಂದು ತಿಳಿದು ಬೇಸರವಾಯಿತು.
ಕರ್ನಾಟಕದಲ್ಲಿ ಹೆಚ್ಚು ಪ್ರಚಾರದಲ್ಲಿರುವ
ಪ್ರೆಸ್ ಕ್ಲಬ್ನಲ್ಲಿ ಭಾನುವಾರದಂದು ತರಬೇತಿಯನ್ನು ಪಡೆಯುತ್ತೇವೆ ಎಂದಾಗ ಕಾರ್ಯದರ್ಶಿಮಲ್ಲಪ್ಪನವರು ಅಂದು ಯಾವ ಪತ್ರಿಕಾಗೋಷ್ಠಿಯೂ ಇರುವುದಿಲ್ಲ. ಸುಮ್ಮನೆ ಬಂದು ಏನುಮಾಡುತ್ತೀರಿ ಎಂದು ಪ್ರಶ್ನಿಸಿದರು. ಅದು ನಮಗೂ ದೊಡ್ಡ ಪ್ರಶ್ನೆಯಾಯಿತು.
ನಾವು ಎದೆಗುಂದಲಿಲ್ಲ.. ಕೂಡಲೇ ಭ್ರಷ್ಟಾಚಾರದ ವಿರುದ್ಧ ನಾವೇ ಒಂದು ಅಣುಕು ಪತ್ರಿಕಾಗೋಷ್ಠಿಯನ್ನು ನಡೆಸಲು ತೀಮರ್ಾನಿಸಿ ಇತರ ಮಾಧ್ಯಮ ಮಿತ್ರರಿಗೆ ಆಹ್ವಾನಿಸಿದೆವು.
ಬೆಳಿಗ್ಗೆಯೇ ಎಲ್ಲಾ ಗೆಳೆಯರೂ ಸೇರಿಕೊಂಡು ಮತ್ತೊಮ್ಮೆ ತರಬೇತಿಯನ್ನು ಮೆಲುಕು ಹಾಕಿದೆವು. ನಮ್ಮ ಗೆಳೆಯರೇ ಡ್ರೈವರ್ ಕೆಲಸಗಳನ್ನು ಮಾಡುವ ವಾಹನ ಆಟೋಗಳಿಗೆ ತಲಾ 20ರೂಗಳನ್ನು ನೀಡಿ ಡಿಸೇಲ್ ತುಂಬಿಸಿಕೊಂಡು ಪ್ರೆಸ್ ಕ್ಲಬ್ ಕಡೆ ಹೊರೆಟೆವು.

ಗೋಷ್ಠಿಯನ್ನು ನಡೆಸಿಕೊಡುವ ಗೆಳೆಯರ ಎದೆಗಳಲ್ಲಿ ನಡುಕ ಆರಂಭವಾಯಿತು. ಪ್ರೆಸ್ ಕ್ಲಬ್ನ ಎದುರಿಗಿರುವ ಕಬ್ಬನ್ ಪಾರ್ಕಿನಲ್ಲಿ ಕುಳಿತು ಮತ್ತೊಮ್ಮೆ ತಯಾರಿ ನಡೆಸಿ ಧೈರ್ಯದಿಂದ ಗೋಷ್ಠಿಯ ಕಡೆಗೆ ಹೊರೆಟೆವು
.
10.30ಕ್ಕೆ ಎಂದು ಹೇಳಿದ್ದ ಪತ್ರಿಕಾಗೋಷ್ಠಿಗೆ 11ಗಂಟೆಯಾದರು ಯಾವುದೇ ಮಾಧ್ಯಮದವರು ಬರಲಿಲ್ಲ. ಇದ್ದವರು ನಮ್ಮದೇ ತಂಡದ ವರದಿಗಾರರು. ಸರಿ.. ಗೋಷ್ಠಿ ಆರಂಭಿಸಿದೆವು. ಗೋಷ್ಠಿ ಆರಂಭವಾಗುತ್ತಿದ್ದಂತೇ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಹಾಗೂ ಸಂಜೆವಾಣಿ ಪತ್ರಿಕೆಯ ಇಬ್ಬರು ವರದಿಗಾರ್ತಿಯರು ನಮ್ಮನ್ನು ಸೇರಿಕೊಂಡರು. ನಮಗೆ ಒಂದಷ್ಟು ಹುಮ್ಮಸ್ಸು ತುಂಬಿತ್ತು.
ಗೋಷ್ಠಿಯಲ್ಲಿ ಪಾಲ್ಗೊಂಡವರು: ರಾಮಕೃಷ್ಣ (ಡಾಮಿ), ಕಿರಣ್ (ಚಿಕ್ಕಣ್ಣ), ಪ್ರತಾಪ ಮತ್ತು ರವರು ಗೋಷ್ಠಿಯನ್ನು ನಡೆಸಿದರು. ಇತರ ಗೆಳೆಯರು ವರದಿಗಾರರಾದರು.ಸ್ವಾಗತ: ಸಂಘಟನೆಯ ರಾಮಕೃಷ್ಣರವರು ಎಲ್ಲರಿಗೂ ಸ್ವಾಗತ ಮಾಡಿ ಗೋಷ್ಠಿಯಲ್ಲಿದ್ದವರನ್ನು ಪರಿಚಯ ಮಾಡಿಕೊಟ್ಟರು.ಪ್ರಸ್ತಾವನೆ: ಗೋಷ್ಠಿಯ ಬಗ್ಗೆ ಪ್ರಸ್ತಾವನೆಯನ್ನು ಕಿರಣ್ (ಚಿಕ್ಕಣ್ಣ)ರವರು ಮಾಡಿಕೊಟ್ಟರು.ಒತ್ತಾಯಗಳು: ಪ್ರತಾಪ ರವರು ಸಂಘಟನೆಯ ಒತ್ತಾಯಗಳ ಬಗ್ಗೆ ವಿವರಿಸಿದರು.
ಅಣುಕು ಪತ್ರಿಕಾಗೋಷ್ಠಿ ಆಗಿರುವುದರಿಂದ ನಮ್ಮ ಪತ್ರಿಕಾಗೋಷ್ಠಿಯ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು ಎಂದುಕೊಂಡಿದ್ದ ನಮಗೆಲ್ಲಾ ಗಾಬರಿಯಾಯಿತು.ಕೂಡಲೇ ಗೋಷ್ಠಿಯಲ್ಲಿ ಹಾಜರಿದ್ದ ನಮ್ಮ ಸಂಘಟಕರು ಉತ್ತರ ನೀಡಿದರು. ಹೌದು ಈ ವ್ಯವಸ್ಥೆ ಭ್ರಷ್ಟವಾಗಿದೆ. ಹಾಗೆಂದು ನಾವು ಮೌನವಹಿಸಿ ಸಹಿಸಿಕೊಂಡು ಹೋಗಲು ಸಾಧ್ಯವಿಲ್ಲ. ಜನರನ್ನು ಜಾಗೃತರನ್ನಾಗಿ ಮಾಡುತ್ತೇವೆ. ಆ ಮೂಲಕ ಬದಲಾವಣೆಯನ್ನು ತರುತ್ತೇವೆ ಎಂದು ವಿವರಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಆ ಅನುಭವಿ ವರದಿಗಾರರು 'ಸಾಧ್ಯವೇ ಇಲ್ಲಾ.. ನೀವು ಯಾವುದೇ ಕೆಲಸಗಳನ್ನು ಮಾಡಿಸಿಕೊಳ್ಳಲೂ ಲಂಚವನ್ನು ನೀಡಲೇ ಬೇಕಾಗುತ್ತದೆ. ಇಷ್ಟು ಹಾಳಾಗಿರುವ ವ್ಯವಸ್ಥೆಯನ್ನು ನೀವು ಸರಿಮಾಡಲು ಸಾಧ್ಯವೇ ಇಲ್ಲಾ.. ಲೋಕಾಯುಕ್ತರಿಗೇ ಬಾಗದ ಜನ ನಿಮ್ಮಿಂದ ಬದಲಾಗುತ್ತಾರೆಯೇ? '
ಎಂದು ಪ್ರಶ್ನಿಸಿದರು.
'ಖಂಡಿತವಾಗಿಯೂ.. ನೀವು ಹೇಳುತ್ತಿರುವುದು ನಿಜ. ಆದರೆ.. ಓದಲು ಬರೆಯಲು ಬಾರದೇ ಡ್ರಗ್ಸ್ ಕುಡಿತ ಇತ್ಯಾಧಿ ಕೆಟ್ಟ ಚಟಗಳಿಗೆ ದಾಸರಾಗಿದ್ದ ನಮ್ಮ 30 ಜನ ಯುವಕರನ್ನು ನಾವು ಜಾಗೃತರಾಗಿಸಿದ್ದೇವೆ ಇದು ಸಾಧ್ಯವಾಗಿದೆ. ನಾವೆಲ್ಲರೂ ನಿಮ್ಮ ಮುಂದಿದ್ದೇವೆ ಹಾಗೆಯೇ ಮುಂದೊಂದು ದಿನ ಈ ಸಂಖ್ಯೆ ಹೆಚ್ಚಿ ಸಮಾಜಿಕ ಬದಲಾವಣೆಗೆ ಕಾರಣವಾಗುವ ಬಗ್ಗೆ ನಾವು ವಿಶ್ವಾಸ ಇಟ್ಟಿದ್ದೇವೆ. 'ಎಂಬ ಮಾತುಗಳು ಅವರನ್ನು ಚಕಿತರನ್ನಾಗಿ ಮಾಡಿದವು.ಅವರು ನಮಗೆ ಶುಭಕೋರಿ ಹೊರಟರು.
ಪ್ರಜಾವಾಣಿಯ ಸತ್ಯನಾರಾಯಣ ರಾವ್ ಸರ್ ನಮಗೆಲ್ಲಾ ಊಟದ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಪ್ರೆಸ್ಕ್ಲಬ್ನಲ್ಲಿ ಊಟ ನಮ್ಮನ್ನು ಘಮ್ಮೆಂದು ಕಾಡುತ್ತಿತ್ತು. ಆದರೆ ನಾವು ವರದಿಯನ್ನು ಪೂರೈಸಿಯೇ ನಂತರ ಊಟ ಮಾಡಬೇಕಾದ ನಿಬಂಧನೆಯನ್ನು ಸ್ವಯಂಗೊಳಿಸಿದ್ದೆವು. ಹಾಗಾಗಿ ಬಾಯಿ ನೀರನ್ನು ನುಂಗುತ್ತಾ ವರದಿ ಮಾಡಿದೆವು.
ಸುಮಾರು 3 ಗಂಟೆಯ ಸಮಯಕ್ಕೆ ಸರಿಯಾಗಿ ನಾವು ಪ್ರಜಾವಾಣಿಗೆ ಲಗ್ಗೆ ಹಾಕಿದೆವು. ಸಂಪಾದಕರು ಹಾಗೂ ಮುಖ್ಯ ವರದಿಗಾರರ ಅನುಪಸ್ಥಿತಿಯಲ್ಲಿ ನಮಗೆ ನಾರಾಯಣ್ ರಾವ್ ಮೆಟ್ರೋ ವಿಭಾಗದ ಮುಖ್ಯಸ್ಥರು ಪ್ರಜಾವಾಣಿ ಕಛೇರಿಯ ಹಂತ ಹಂತಗಳನ್ನು ವಿವರಿಸಿದರು.
ಪುಟ ವಿನ್ಯಾಸ
ಚಿತ್ರ ಸಂಪಾದನೆ ಹಾಗೂ
ಶೇಖರಣೆಸುದ್ದಿಯ ತಯಾರಿಕಾ ಹಂತಗಳು ಇನ್ನಿತರೆ ವಿಚಾರಗಳನ್ನು ತಿಳಿಸಿಕೊಟ್ಟರು.

ನಂತರ ಕ್ಯಾಂಟಿನ್ನಲ್ಲಿ ನಮಗಾಗಿ ಬಿಸಿಬಾದಾಮಿ ಹಾಲು ಬಿಸ್ಕೆಟ್ ತಯಾರಿಗಿದ್ದವು. ನಾವೆಲ್ಲ ಸವಿದು ಎಲ್ಲಾ ಪ್ರಜಾವಾಣಿ ಬಳಗಕ್ಕೂ ಧನ್ಯವಾದಗಳನ್ನು ಹೇಳಿ ಹೊರಟೆವು.
ನಾವು ಹೊರ ಬರುತ್ತಿದ್ದಂತೆ ಸಂಜೆವಾಣಿ ಪತ್ರಿಕೆಯಲ್ಲಿ ನಮ್ಮ ಪತ್ರಿಕಾಗೋಷ್ಠಿ ಬಗ್ಗೆ ಆಕರ್ಷಕವಾಗಿ ಸುದ್ದಿ ಪ್ರಕಟವಾಗಿತ್ತು. ಇದು ನಮ್ಮಲ್ಲಿ ಹೊಸ ಕನಸನ್ನು ಚಿಗುರೋಡೆಸಿತು. ನಮ್ಮದೇ ಆದ ಮಾಧ್ಯಮದ ಕನಸುಗಳು ಚಿಗುರೊಡೆಯುತ್ತಿವೆ..
Monday, February 22, 2010
ಪತ್ರಿಕೋದ್ಯಮ ತರಬೇತಿ
ನಾವು ಹಲವಾರು ತಿಂಗಳುಗಳ ಕಾಲ ಕಷ್ಟಪಟ್ಟು ಪ್ರತಿ ತಿಂಗಳು ರೂಪಾಯಿಗಳನ್ನು ಕೂಡಿಹಾಕಿ ಅತ್ಯಂತ ಕಷ್ಟದಿಂದ ಬೆವರಸಿರಿ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಅದು ತಕ್ಕ ಮಟ್ಟಿಗೆ ಯಶಸ್ವಿಯೂ ಆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ನಮ್ಮ ಪ್ರಯತ್ನಕ್ಕೆ ಶ್ಲಾಘನೆಯನ್ನು ನೀಡಿದರು. ನಮ್ಮ ಎಲ್ಲಾ ಕಾರ್ಯಕರ್ತರೂ ತುಂಬಾ ಹೆಮ್ಮೆಪಟ್ಟುಕೊಂಡರು. ಹಲವಾರು ತಿಂಗಳುಗಳಿಂದ ಮಾಡಿದ್ದ ಶ್ರಮ ನಮಗೆ ತೃಪ್ತಿಯನ್ನು ನೀಡಿತು.
ಆದರೆ ನಮ್ಮ ಎದೆಗಳಲ್ಲೊಂದು ನೋವಿನ ಬೆಂಕಿಯ ಕಿಡಿ ಹೊತ್ತಿಕೊಂಡಿತ್ತು. ಕಾರ್ಯಕ್ರಮದ ಮಾರನೇ ದಿನ ಸಂಜೆ ನಾವೆಲ್ಲರೂ ಕಾರ್ಯಕ್ರಮದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಭೆ ಸೇರಿದ್ದೆವು. ಕಾರ್ಯಕ್ರಮಕ್ಕೆ ಹಲವಾರು ಮಾಧ್ಯಮದವರು ಪಾಲ್ಗೊಂಡು ನಮ್ಮ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ವರದಿಗಳನ್ನು ಸಿದ್ದಪಡಿಸಿಕೊಂಡಿದ್ದರು. ತಡವಾಗಿ ಬಂದ ಕೆಲ ಮಾಧ್ಯಮದವರಂತೂ ಸನ್ಮಾನಿತರನ್ನು ಮತ್ತೆ ಮತ್ತೆ ಕೂರಿಸಿ ತಮಗೆ ಬೇಕಾದಂತೆ ವಿವಿಧ ಭಂಗಿಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿದರು. ಮತ್ತೆ ಕೆಲವರು ಕಾರ್ಯಕ್ರಮ ಆರಂಭವಾಗುವುದಕ್ಕೆ ಮುನ್ನವೇ ಬಂದು ಕಾದು ಕುಳಿತ್ತಿದ್ದರು.
ಮಾರನೇ ದಿನ ಯಾವುದೇ ಚಾನೆಲ್ಗಳಲ್ಲಾಗಲೀ ಪತ್ರಿಕೆಗಳಲ್ಲಾಗಲೀ ನಮ್ಮ ಕಾರ್ಯಕ್ರಮದ ಫೋಟೋ ವರದಿ ಇರಲಿ ಒಂದು ಅಕ್ಷರವೂ ಸಹ ಬರಲಿಲ್ಲ. ಪ್ರಚಾರಕ್ಕಾಗಿ ಈ ಕಾರ್ಯಕ್ರಮವನ್ನು ಮಾಡಿರಲಿಲ್ಲ, ಆದರೆ ಅಷ್ಟೂ ಮಾಧ್ಯಮದವರು ಬೇಕು ಬೇಕಾದಂಗೆಲ್ಲಾ ಕಿರಿ ಕಿರಿ ಮಾಡಿ ಫೋಟೋ ಕ್ಲಿಕ್ಕಿಸಿ ಮಾಹಿತಿ ಪಡೆದುಕೊಂಡು ಹೋಗಿದ್ದು ಹಾಗೂ ಕೆಲ ಮಾಧ್ಯಮದವರು ಮುಖಪುಟದಲ್ಲೇ ಕಾರ್ಯಕ್ರಮ ವರದಿ ಬರುವುದೆಂದು ಹೇಳಿದ್ದು ನಮಗೆ ಆಸೆ ಹುಟ್ಟಿಸಿತ್ತು.
ಹಲವಾರು ಜನಪರ ಪ್ರತಿಭಟನೆ ಹೋರಾಟಗಳನ್ನು ಸಂಘಟಿಸಿದ್ದ ಸಂಘಟಕರಿಗೆ ಈ ರೀತಿಯ ಮಾಧ್ಯಮದವರ ನಡುವಳಿಕೆ ಸಾಮಾನ್ಯವೇ ಎನ್ನಿಸಿತ್ತು ವಿಶೇಷವೇನೂ ಇರಲಿಲ್ಲ. ಆದರೆ ತಮ್ಮದೇ ಜಂಜಾಟದ ಬದುಕಿನ ನಡುವೆ ಒದ್ದಾಡುತ್ತಾ ಎಲ್ಲಾ ನೋವುಗಳನ್ನು ನುಂಗಿಕೊಂಡು ಫಳಕ್.. ಫಳಕ್.. ಎಂದು ಮುಖಕ್ಕೆ ಬಡಿದ ಮಾಧ್ಯಮದವರ ಕ್ಯಾಮರಾ ಬೆಳಕು ಸಾಮಾನ್ಯ ಕಾರ್ಯಕರ್ತರ ಕನಸುಗಳ ಮೇಲೆ ಬರೆ ಹಾಕಿತ್ತು.
ಅಲ್ಲಾ ಅಣ್ಣಾ.. ಅಷ್ಟು ಜನ ಬಂದು ಹಂಗ್ ನಿಂತ್ಕೊಳ್ಳಿ ಹಿಂಗೆ ನಿಂತ್ಕೊಳ್ಳಿ.. ನಾಳೆ ಪೇಪರ್ ನೋಡಿ ನಿಮ್ಮ ನ್ಯೂಸ್ ಫೋಟೋ ಬಂದಿರುತ್ತೆ ಅಂತೆಲ್ಲಾ ಹೇಳಿ.. ಒಂದು ಲೈನೂ ಬರ್ದಿಲ್ಲ.. ಯಾಕೆ?
ನಾವು ತಪ್ಪು ಮಾಡ್ಲಿಲ್ಲಾಂದ್ರೂ ಕಳ್ಳ್ರು ಅಂತ ಪೊಲೀಸೋರು ಎಳ್ಕೊಂಡೋಗಿ ನಾವು ಬೇಡ ಅಂದ್ರೂ ಸ್ಲೇಟ್ ಹಿಡ್ಸಿ ಫೋಟೋನ ದೊಡ್ಡ ದೊಡ್ಡದಾಗಿ ಹಾಕ್ತಾರೆ.. ಆದ್ರೆ ನಾವು ಕುಡಿಯೋದು ಎಲ್ಲಾ ಬಿಟ್ಟೂ ಒಳ್ಳೇ ಕೆಲಸ ಮಾಡಿದ್ರೆ ಯಾಕೆ ಹಾಕಲ್ಲಾ?..
ಅವರುಗಳ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿರಲಿಲ್ಲ. ಈ ಸಮಾಜ ಬಡವರು ತಪ್ಪು ಮಾಡಿದಾಗ ಕಳ್ಳರಂತೆ ಚಿತ್ರಿಸುವುದಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಅವರ ತ್ಯಾಗ ಸಾಧನೆಗಳಿಗೆ ಯಾಕೆ ಕೊಡುವುದಿಲ್ಲ!. ಶ್ರೀಮಂತರ ನಾಯಿ ಕಳೆದು ಹೋದರೆ ಡಾಗ್ ಷೋಗೆ ನೀಡುವ ಮುತುರ್ವಜಿ ನೂರಾರು ಬಡ ಕಾಮರ್ಿಕರು ಕಟ್ಟಡ ಕಟ್ಟುವಾಗ ಚರಂಡಿ ಸ್ವಚ್ಛಗೊಳಿಸುವಾಗ ಪ್ರಾಣಬಿಟ್ಟರೂ ಕೊಡುವುದಿಲ್ಲ ಯಾಕೆ?.
ಓಹೋ ಪತ್ರಿಕೆಗಳನ್ನು ನಡೆಸುವವರು ಓದುವವರು ಕೇವಲ ಶ್ರೀಮಂತ ವರ್ಗದವರೇ ಆಗಿದ್ದಾರೆ. ಹಾಗಾಗಿ ಪತ್ರಿಕೆಗಳು ಅವರ ಪರವಾಗಿಯೇ ಇವೆ ಅಲ್ಲವೇ!. ಬೆವರು ರಕ್ತ ಸುರಿಸಿ ಮರಗಳನ್ನು ಬೆಳಸಿ ಕೂಯ್ದು ಕಾಗದ ತಯಾರಿಸಿ ಯಂತ್ರಗಳನ್ನು ತಯಾರಿಸಿ ಮಸಿಯನ್ನು ತಯಾರಿಸುವ ಹಾಗೂ ಇವರ ಕಛೇರಿಗಳನ್ನು ಸ್ವಚ್ಛಗೊಳಿಸುವ ಬಡವರಿಗೆ ಯಾವ ಅಧಿಕಾರವಿದೆ ಅಲ್ಲವೇ?.
ಈ ಪ್ರಶ್ನೆಗಳು ಹಲವು ತಿಂಗಳುಗಳ ಕಾಲ ನಮ್ಮ ಹೃದಯಗಳನ್ನು ಮೆದುಳುಗಳನ್ನು ಹಿಂಡಿ ಹಿಂಡಿ ಕಾಡಿದವು. ಕೊನೆಗೆ ಎಲ್ಲಾ ಮಾಧ್ಯಮಗಳ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳೋಣ ಎಂಬ ಸಲಹೆಗಳೂ ಬಂದವು. ಆದರೆ ಪ್ರಚಾರ ಬಯಸದ ನಮಗೆ ಅದು ಸೂಕ್ತವಾಗಿರಲಿಲ್ಲ. ಅಲ್ಲದೇ ನಮಗೆ ಯಾರ ದಾಕ್ಷಿಣ್ಯವೂ ಬೇಡವಾಗಿತ್ತು. ಕಾರ್ಯ ಮುಖೇನ ಉತ್ತರವನ್ನು ನೀಡುವ ಛಲವನ್ನು ಹುಟ್ಟು ಹಾಕಿತು.
Thursday, January 14, 2010
ಜನಪರ ಕಾರ್ಯಗಳು
ಇಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಆಡಳಿತ ಜನರ ನಿರ್ಲಕ್ಷ್ಯದಿಂದ ಅದರೊಳಗೆ ಸಾರಾಯಿ ಪಾಕೇಟ್ ಕಡ್ಡಿ ಕಸ ಇತ್ಯಾಧಿ ಬಿದ್ದು ನಾರುತ್ತಾ ರೋಗದ ಮನೆಯಾಗಿತ್ತು. ನೀರಿನ ನಲ್ಲಿಗಳು ಮುರಿದು ಹೋಗಿದ್ದವು. ಹೊರಚೆಲ್ಲುವ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಗೆ ಹರಿದು ರಸ್ತೆ ಪೂರ ಕೊಚ್ಚೆಯಾಗಿತ್ತು. ಟ್ಯಾಂಕ್ನ ಸುತ್ತ ಮುತ್ತ ನೀರು ನಿಂತು ಸೊಳ್ಳೆ ಹಾವಳಿಯಿತ್ತು. ಇದನ್ನು ಮನಗಂಡ ಸಂಘಟನೆಯ ಸದಸ್ಯರು ಪ್ರತಿ ಮನೆಯಿಂದ 1 ರೂ ಸಂಗ್ರಹಿಸಿ ಕುಡಿಯುವ ನೀರಿನ ಟ್ಯಾಂಕನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛ ಮಾಡಲಾಗುತ್ತದೆ.




ರಸ್ತೆ ಸ್ವಚ್ಚತೆ : ರಸ್ತೆಯ ಬದಿಯಲ್ಲಿ ಬೆಳೆದ ಗಿಡ ಗಂಟೆಗಳನ್ನು ಕಿತ್ತು ಮುಳ್ಳು ಗಿಡಗಳನ್ನು ಸುಟ್ಟು ನೈರ್ಮಲ್ಯ ಕಾಪಾಡಲು ಮಕ್ಕಳು ಯುವಕರು ದುಡಿಯುತ್ತಿದ್ದಾರೆ.
Wednesday, July 15, 2009
ನಮ್ಮ ಹೆಜ್ಜೆಗಳು
---

ಅರ್ಥಿಕವಾಗಿ ತೀವ್ರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ನಾವು ಧೈರ್ಯ ಬಿಡದೇ ಸಾಗುತ್ತಿದ್ದೇವೆ. ಬಡತನವೇ ಬಳುವಳಿಯಾಗಿ ಪಡೆದ ನಮ್ಮ ಸದಸ್ಯರು ಅದರಲ್ಲೂ ಹೆಣ್ಣುಮಕ್ಕಳು ನಾವು ಕೂತು ಚರ್ಚಿಸಲು ಸ್ಥಳವಿಲ್ಲದೇ ಪಾರ್ಕುಗಳಲ್ಲಿ ಕುಳಿತು ಚರ್ಚೆ ನಡೆಸುವ ಸಮಯದಲ್ಲೂ ಕುಗ್ಗದೇ ಈ ಸಮಾಜದಲ್ಲಿ ನಮ್ಮ ಸಣ್ಣ ಸಾಧನೆಗಳಿಗೆ ಕಾಣಿಕೆ ನೀದುತ್ತಿದ್ಧಾರೆ.

3. ನಮ್ಮ ಸಂಸ್ಥೆಗಳ ಸಾಧನೆಗೆ ಈ ಸಂಸ್ಥೆಯ ಸಂಸ್ಥಾಪಕರಿಗೆ ಅಂಬಾ ಪ್ರಕಾಶನ ಯಳಂದೂರು ಚಾಮರಾಜನಗರ ಇವರು 'ಸುವರ್ಣ ಸಿರಿ ಕನ್ನಡಿಗ' ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.4. ಪತ್ರಗಳ ಮೂಲಕದ ರಾಜ್ಯಮಟ್ಟದ ರಂಗೋಲಿ ಸ್ಪರ್ಧೆ ಹಾಗೂ ಬಡಮಕ್ಕಳಿಗೆ ಆಟಿಕೆಗಳನ್ನು ಪೂರೈಸುತ್ತಿರುವ ಹನಿಚೇತನ ಕಾರ್ಯಕ್ರಮಗಳು ಹೆಚ್ಚು ವಿಶಿಷ್ಟ, ವಿನೂತನವಾಗಿ ಜನಪ್ರಿಯವಾಗಿವೆ.
5. ನಾವು ನೆಡೆಸುತ್ತಿರುವ ಎಲ್ಲಾ ತರಬೇತಿ ಶಿಬಿರಗಳು ಉಚಿತವಾಗಿ ಹಾಗೂ ನುರಿತ ತಜ್ಞರಿಂದ ನೆಡೆಸಲ್ಪಡುತ್ತಿವೆ.
6. ಪಿ.ಯು.ಸಿ.ಎಲ್ ಸೇರಿದಂತೆ ಹಲವಾರು ಸಂಘಾಟನೆ ಗಳೊಂದಿಗೆ ಸೇರಿ ಮಾಡಿರುವ 'ಕಟ್ಟಡ ಕಾರ್ಮಿಕರ ಹಿತರಕ್ಷಣಾ ಕ್ರಿಯಾ ಸಮಿತಿ'ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ಸಂಸ್ಥೆಯ ಸಂಸ್ಥಾಪಕರೇ ಸಂಚಾಲಕರಾಗಿ ಕಟ್ಟಡ ಕಾರ್ಮಿಕರ ಅಪಘಾತಗಳ ಬಗ್ಗೆ ಸತ್ಯಶೋಧನೆ ಹಾಗೂ ಅವರ ಪರಿಹಾರ, ಹಕ್ಕುಗಳ ಬಗ್ಗೆ ಅಧ್ಯಯನ ಹಾಗೂ ಹೋರಾಟದಲ್ಲಿ ನಿರಂತರವಾಗಿ ದುಡಿಯುತ್ತಿದೆ.
ಸ್ತ್ರೀ ಆಂದೋಲನ
ಶಿಕ್ಷಣ
ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಮಹಿಳಯರ ಪರವಾಗಿ ಸರ್ಕಾರ ಹಾಗೂ ಸರ್ಕಾರರೇತರ ಹಲವಾರು ಸಂಘ,ಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದರೂ, ಹಲವಾರು ಕಾನೂನುಗಳನ್ನು ಜಾರಿಗೆ ತಂದಿದ್ದರೂ ಸಹ ದಿನ ನಿತ್ಯ ಮಾಧ್ಯಮಗಳಲ್ಲಿ,ದಿನಪತ್ರಿಕೆಗಳಲ್ಲಿ ಹೆಣ್ಣಿನ ಮೇಲೆ ನೆಡೆಯುತ್ತಿರುವ ಆಸಿಡ್ ಧಾಳಿ, ಅತ್ಯಾಚಾರ, ಭ್ರೂಣಹತ್ಯೆ, ಒಂಟಿ ಮಹಿಳೆ ಯರ ಕೊಲೆಗಳು ಇತ್ಯಾಧಿ ವಿಕೃತ ಗಳು ಹಾಗು ನಾಗರೀಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಘಟನೆಗಳು ಪ್ರಕಟವಾಗುತ್ತಿವೆ. ಈ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಣ್ಣು ಈ ಎಲ್ಲವೂಗಳನ್ನು ಎದುರಿಸಲು ಆಕೆಯನ್ನು ತರಬೇತಿಗೊಳಿಸಿ, ಜಾಗೃತಿಮೂಡಿಸಿ ತಳಮಟ್ಟದಿಂದ ಸಂಘಟಿಸುವ ಮೂಲಕ ಹೆಣ್ಣನ್ನು ಸಬಲೀಕರಿಸಲು ಈ ಆಂದೋಲನವನ್ನು ಆರಂಭಿಸಲಾಗಿದೆ.
ಆಂದೋಲನದ ಸಂಕ್ಷಿಪ್ತ ಧ್ಯೇಯ ಮತ್ತು ಉದ್ದೇಶಗಳು
ಮಹಿಳೆಯರಿಗೆ ಅಗತ್ಯವಾದ ಶಿಕ್ಷಣ ನೀಡುವುದು ತಜ್ಞರಿಂದ ಹಕ್ಕು ಮತ್ತು ಕಾನೂನಿನ ಬಗ್ಗೆ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುವುದು .ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡುವುದು. ಶಾಲಾ-ಕಾಲೇಜು ಮತ್ತು ಉದ್ಯೋಗದಲ್ಲಿರುವ ಮಹಿಳೆಯರನ್ನು ಗುಂಪುಗೊಳಿಸಿ ಸಂಘಟಿಸುವುದು. ಮಹಿಳೆಯರೊಡನೆ ನೆಡೆಯುವ ಅಸಭ್ಯವರ್ತನೆ, ಲೈಂಗಿಕ ಕಿರುಕುಳಗಳನ್ನುಹಾಗೂ ಶೋಷಣೆಗಳನ್ನು ವಿರೋಧಿಸುವುದು ಹಾಗು ಕಾನೂನಿನ ರೀತಿ ಕ್ರಮಕ್ಕೆ ಹೋರಾಟ ನೆಡೆಸುವುದು. ಹೆಣ್ಣಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ದೈಹಿಕ ದೃಢತೆಯ ಶಿಕ್ಷಣ ನೀಡುವುದು. ಆಕೆ ಎದುರಿಸುವ ಆರೋಗ್ಯದ ಸಮಸ್ಯೆಗಳ ಬಗ್ಗೆ ನುರಿತ ವೈದ್ಯರಿಂದ ಸಲಹೆ ಅರಿವು ಮೂಡಿಸುವುದು. ಆಧುನಿಕ ತಂತ್ರಜ್ಞಾನ,ಬೀದಿನಾಟಕಗಳ,ಸಾಕ್ಷ್ಯಚಿತ್ರಗಳ ಮೂಲಕ ಹಾಗೂ ಮಹಿಳಾಪರವಾದ ಲೇಖನ,ವಾರ್ತಾ ಪತ್ರ ,ಬರವಣಿಗೆಗಳನ್ನು ಪ್ರಕಟಿಸಿ ಆ ಮೂಲಕ ಜಾಗೃತಿ ಮೂಡಿಸುವುದು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿಚಾರ ಸಂಕೀರ್ಣಗಳು,ಚರ್ಚಿಸಿ,ಸಮ್ಮೇಳನ,ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
ಹನಿಚೇತನ
ಹನಿಚೇತನ
ಇಂದಿನ ಮಕ್ಕಳೇ ಮುಂದಿನ ಈ ಸಮಾಜ ಹಾಗೂ ಸಮಾಜದ ಬೆನ್ನೆಲುಬಾಗಿದ್ದು ನಾವು ಉತ್ತಮ ಸಮಾಜದ ಕನಸನ್ನು ಕಾಣುತ್ತೇವೆಂದರೆ ಮೊದಲು ಈಗಿನ ಮಕ್ಕಳನ್ನು ಉತ್ತಮರನ್ನಾಗಿ ಬೆಳೆಸಬೇಕಾಗಿದೆ.
ಈ ಕಾರ್ಯಕ್ರಮದಲ್ಲಿ....
'ವ್ಯಕ್ತಿತ್ವ ವಿಕಸನ ಹಾಗೂ ತರಬೇತಿ ಶಿಬಿರ'
- ಬಡ ವಿದ್ಯಾರ್ಥಿಗಳು , ಸ್ಲಂ ಮಕ್ಕಳು ಹಾಗೂ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ 'ವ್ಯಕ್ತಿತ್ವ ವಿಕಸನ' ಕಾರ್ಯಕ್ರಮ, 'ಡ್ರಾಯಿಂಗ್' 'ಉಚಿತ ಇಂಗ್ಲೀಷ್ ತರಗತಿ'ಗಳನ್ನು ನೆಡೆಸಲಾಗುತ್ತಿದೆ. ಈ ಮೂಲಕ ಅವರ ಪ್ರತಿಭೆಯನ್ನು ಹೊರತರುವ ಪ್ರಯತ್ನ ಹಾಗೂ ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸಲಾಗುತ್ತಿದೆ.
- ಕೆ.ಟಿ.ಎಸ್.ವಿ ಪ್ರೌಢಶಾಲೆ ರಾಜಾಜಿನಗರ ಬೆಂಗಳೂರು ಇಲ್ಲಿನ ಎಸ್.ಎಸ್,ಎಲ್.ಸಿ ವಿಧ್ಯಾರ್ಥಿಗಳಿ
ಗೆ 'ಪರೀಕ್ಷಾ ಸಿದ್ದತೆ' ಬಗ್ಗೆ 2008 ಮಾರ್ಚ್ ನಲ್ಲಿ ತರಬೇತಿ ನೀಡಲಾಯಿತು.
- ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ವ್ಯಕ್ತಿವಿಕಸನ ಶಿಬಿರಗಳನ್ನು ನೆಡೆಸಿಕೊಡಲಾಯಿತು.
- ಚಿತ್ರಕಲಾ ಪರಿಷತ್ತ್ ನ ಭಾರ್ಗವಿಯವರಿಂದ 'ಚಿತ್ರಕಲೆ ತರಬೇತಿ'ಯನ್ನು ನೀಡಲಾಯಿತು. ಸ್ಲಂಗಳಲ್ಲಿನ ಮಕ್ಕಳಿಗೆ ಮನೆಪಾಠಗಳನ್ನು ನೆಡೆಸಲಾಯಿತು.
- 2006-07ನೇ ಸಾಲಿನ ಎಸ್.ಎಸ್.ಎಲ್.ಸಿ ಸರ್ಕಾರಿ ಶಾಲೆ ಮಕ್ಕಳಿಗೆ 'ಉಚಿತ ಇಂಗ್ಲೀಷ್ ತರಬೇತಿ'ಯನ್ನು ನೆಡೆಸಲಾಯಿತು.
ನೆರವು :
ಮೂಲಭೂತ ಸೌಕರ್ಯಗಳನ್ನು, ಲೇಖನ ಸಾಮಗ್ರಿಗಳನ್ನು ಒದಗಿಸುತ್ತಾ ಉತ್ತೇಜಿಸುವ ಹಾಗೂ ಅವರ ಉತ್ತಮ ಕನಸುಗಳ ಭವಿಷ್ಯಕ್ಕೆ ಪೋಷಣೆ ನೀಡಲಾಗುತ್ತಿದೆ. ಪ್ರತಿವರ್ಷ ಹಲವಾರು ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಅರ್ಥಿಕ ನೆರವು ಹಾಗೂ ಲೇಖನ ಸಾಮಗ್ರಿಗಳನ್ನು ನೀಡಲಾಗುತ್ತಿದೆ.
ಕಾವ್ಯ ಚೇತನ
ಸಮೃದ್ದ ಕನ್ನಡ ಭಾಷೆಯ ಸಾಹಿತ್ಯಲೋಕದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಹಾಗೂ ಯುವಜನರನ್ನು ಕಾವ್ಯಪ್ರಿಯರನ್ನು ಉತ್ತೇಜಿಸುವ ಉದ್ದೇಶದಿಂದ 'ಕಾವ್ಯಚೇತನ' ಘಟಕವನ್ನು ಸ್ಥಾಪಿಸಿದ್ದು ಈ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗ ಬೆಂಗಳೂರು ನಗರದಲ್ಲಿ ಸದಸ್ಯತ್ವವನ್ನು ಆರಂಭಿಸಿದ್ದು ಸುಮಾರು 100 ಕಾವ್ಯಪ್ರಿಯರು ಸದಸ್ಯರಾಗಿ ಸೇವೆಯಲ್ಲಿ ತೊಡಗಿದ್ದು ಸಾಹಿತ್ಯಕ್ಷೇತ್ರದಲ್ಲಿ ಸಾಧನೆಗೆ ಶ್ರಮಿಸುತ್ತಿದ್ದಾರೆ. ಆಸಕ್ತರು ಈ ಸಾಹಿತ್ಯಸೇವೆಯಲ್ಲಿ ತಮ್ಮ ಹೆಗಲು ಜೋಡಿಸಬಹುದು.
ಯುವ ಚೇತನ
ನಾಡಿನ ಬೆನ್ನೆಲುಬಾದ ಯುವಜನರಿಗೆ ಶಿಕ್ಷಣ,ಸ್ವಯಂಉದ್ಯೋಗ ತರಬೇತಿ ಹಾಗೂ ನೆರವು ನೀಡಿ ಸ್ವಾಭಿಮಾನಿಗಳಾಗಿ ಮಾಡಿ ಅವರಲ್ಲಿ ಸಮಾಜದ ಬಗ್ಗೆ ಉತ್ತಮ ಅರಿವು, ಅಭಿಮಾನಗಳನ್ನು ಮೂಡಿಸಿ ನಾಡಿನ ಏಳ್ಗೆಗೆ ಯುವಜನರನ್ನು ಸಂಘಟಿಸುವ ಕಾರ್ಯನಿರಂತರ ಮಾಡಲಾಗುತ್ತಿದೆ.
1. ರಾಜಾಜಿನಗರ ಬಿ.ಎಡ್ ಹಾಗೂ ಡಿ.ಎಡ್ ವಿದ್ಯಾರ್ಥಿಗಳಿಗೆ 'ವ್ಯಕ್ತಿವಿಕಸನ ತರಬೇತಿ'ಯನ್ನು ನೀಡಲಾಯಿತು.
2. ಬಡ ಯುವಕ,ಯುವತಿಯರಿಗೆ ಮಾಧ್ಯಮ ತರಬೇತಿಯನ್ನು ನೀಡಲಾಯಿತು.
4. ಯುವಜನರಿಗೆ ಪತ್ರಿಕೋದ್ಯಮ ತರಗತಿಗಳನ್ನು ನೆಡೆಸಲಾಯಿತು.
5. 2006-07ನೇ ಸಾಲಿನಲ್ಲಿ 10 ಬಡ ಯುವಕ-ಯುವತಿಯರಿಗೆ 'ಪ್ರಕೃತಿ ಎನ್.ಬನವಾಸಿ' ಇಂಗ್ಲೀಷ್ ಕಲಿಕಾಕೇಂದ್ರದಲ್ಲಿ ಒಂದು ತಿಂಗಳ ತರಬೇತಿ ಕೊಡಿಸಲಾಯಿತು.
6. ಗಿರೀಶ್.ಎಲ್ ಎಂಬ ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶಧನ ನೀಡಲಾಯಿತು.
7. ಅಶೋಕಪುರಂ ಯೂತ್ ಅಸೋಸಿಯೇಷನ್ ಜೊತೆಗೂಡಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.
ಬೊಂಬೆ ಮನೆ
ಆರ್ಥಿಕವಾಗಿ ದುರ್ಬಲರಾದ ಬಡಮಕ್ಕಳು ಆಡಲು ಉತ್ತಮವಾದ ಆಟಿಕೆಗಳು ಸಿಗದೇ ಅಪಾಯಕಾರಿ ವಸ್ತುಗಳೊಂದಿಗೆ ಆಡುವುದು ಹಾಗೂ ದುಶ್ಚಟಗಳಿಗೆ ಬಲಿಯಾಗುವುದಕ್ಕೆ ಮೂಲ ಕಾರಣವಾಗಿದೆ. ಆದ್ದರಿಂದ ಅವರಿಗೆ ಉತ್ತಮವಾದ ಆಟಿಕೆಗಳನ್ನು ಪೂರೈಸಲಾಗುತ್ತಿದೆ. ಆ ಮೂಲಕ ಅವರ ಸಮಯ ಹಾಗೂ ಅವರ ಕಲಿಯುವ ಆಸಕ್ತಿಯನ್ನು ಉತ್ತಮಗೊಳಿಸಲು ಅವಕಾಶ ಒದಗಿಸಲಾಗುತ್ತಿದೆ.

'ನಾವು ಮಾಡುತ್ತಿರುವುದು ದಾನವಲ್ಲ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಸಹಕಾರ'
ನಾವು
ಚೇತನಧಾರೆಟ್ರಸ್ಟ್ ಮತ್ತು ಜನಾಸ್ತ್ರ ಸಂಸ್ಥೆಗಳು ಯಾವುದೇ ವರ್ಗಸೀಮಿತವಲ್ಲದ,ಲಾಭಾಪೇಕ್ಷೆಯಿಲ್ಲದ,ರಾಜಕೀಯ ದುರುದ್ದೇಶವಿಲ್ಲದ ಸ್ವಯಂಸೇವಾ ಸಂಸ್ಥೆಗಳಾಗಿದ್ದು ಸ್ಲಂಜನರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರೂ ಸೇರಿದಂತೆ ಶೋಷಿತವರ್ಗಗಳ ಕ್ಷೇಮಾಭಿವೃದ್ದಿಗಾಗಿ ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು, ಯುವಕರು, ಬುದ್ದಿಜೀವಿಗಳ ಜೊತೆಗೂಡಿ ಹಲವಾರು ಕಾರ್ಯಕ್ರಮಗಳನ್ನು ನೆಡೆಸುತ್ತಿವೆ.
ಸಂಪರ್ಕ
ಸಂಪರ್ಕ:
ಚೇತನಧಾರೆ
ನಂ.10,2ನೇ ಅಡ್ಡರಸ್ತೆ,
ಇಸ್ಕಾನ್ ದೇವಾಲಯದ ಮುಂಭಾಗ
ಯಶವಂತಪುರ, ಬೆಂಗಳೂರು-560022.
ಸಂಪರ್ಕ ಸಂಖ್ಯೆ: 9448702368.
Email: asthra.janasthra@gmail.com
Thursday, July 2, 2009
ಬೆವರ ಸಿರಿ
Please visit this page http://www.udayavani.com/showstory.asp?news=0&contentid=621546&lang=2
ಈ ನಿಟ್ಟಿನಲ್ಲಿ ಸ್ವಾರ್ಥ ಪುರುಷ ಪ್ರಧಾನ ಸಮಾಜದ ನಿರಂತರ ಶೋಷಿತ ಹೆಣ್ಣಿನ ಒಳಗುದಿಯನ್ನು ಹೊರತೆಗೆಯಲು "ರಾಜ್ಯ ಮಟ್ಟದ ಸ್ತ್ರೀ ಕುರಿತ ಬಂಡಾಯ ಕವನ ಸ್ಪರ್ಧೆ" ಹಾಗೂ "ರಾಜ್ಯ ಮಟ್ಟದ ರಂಗೋಲಿ ಸ್ಪರ್ಧೆಗಳನ್ನು"
ಏರ್ಪಡಿಸಿ ಖ್ಯಾತ ಸಾಹಿತಿಗಳಿಂದ ಆಯ್ಕೆ ಪ್ರಕ್ರಿಯೆ ಮುಗಿಸಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಬಡತನದ ಬೂದಿಯಲಿ ಮುಚ್ಚಿಹೋದ ಪ್ರತಿಭೆಗಳಿಗೆ ಸನ್ಮಾನ ಸಮಾರಂಭ ಬೆವರಸಿರಿಯನ್ನು
ದಿನಾಂಕ:1-3-೨೦೦೯ರಂದು ಭಾನುವಾರ ನಗರದ ಶಾಸಕರ ಭವನದಲ್ಲಿ ಆಯೋಜಿಸಲಾಯಿತು.
ಅತಿಥಿಗಳು: ಬಿ.ಟಿ.ಲಲಿತಾನಾಯಕ್ ಮಾಜಿ ಸಚಿವರು ಹಾಗೂ ಬರಹಗಾರರು
ಪ್ರತಿಭಾನಂದಕುಮಾರ್ ಸಾಹಿತಿಗಳು ಹಾಗೂ ಪತ್ರಕರ್ತರು
ಕಾರ್ಯಕ್ರಮ ವಿವರ:
ಉದ್ಭಾಟನೆ: ಚೇತನಧಾರೆ ಹಾಗೂ ಜನಾಸ್ತ್ರ ಸಂಘಟನೆ ಸದಸ್ಯರಾದ ಸತ್ಯರಾಜ್ ಹಾಗೂ ಅತಿಥಿಗಳು ಉದ್ಭಾಟನೆ ಮಾಡಿದರು. ಸಂಘಟನೆಯ ಗೋಪಾಲ್, ಮೀನಾಶ್ರೀ, ಪ್ರಸಾದ್, ರಾಜೇಶ್ವರಿ, ತೇಜಾಕರ್ಶಿಣಿ 'ಜೋಗದ ಸಿರಿ..'ಯ ಮೂಲಕ ಉದ್ಭಾಟನೆಗೆ ದನಿ ಸೇರಿಸಿದರು.
ಸಂಘಟನೆಯ ಸಂಚಾಲಕರಾದ ಆದಿತ್ಯರವರು ಪ್ರಾಸ್ತಾವಿಕ ಭಾಷಣವನ್ನು, ಸಂಘಟನೆಯ ಉದ್ದೇಶ ಹಾಗೂ ಬೆವರಸಿರಿ ಕಾರ್ಯಕ್ರಮದ ಅಗತ್ಯವನ್ನು ಹೇಳಿದರು.
ಸನ್ಮಾನ:
1. ಸುಮಾರು 300ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿರುವ ಬೆಂಗಳೂರಿನ ವಿನಾಯಕ ಸ್ಲಂನ ಸಾಂಪ್ರದಾಯಿಕ ಪ್ರಸೂತಿ ತಜ್ಞೆ ಮಾಣಿಕ್ಯಮ್ಮ ರವರನ್ನು ಸನ್ಮಾನಿಸಲಾಯಿತು.
2. ತುಮಕೂರಿನ ಬುಲ್ ಬುಲ್ ತಾರ ವಾದಕ ಉಸ್ತಾದ್ ಅಬ್ದುಲ್ ಕಲಾಂ ರವರನ್ನು ಸನ್ಮಾನಿಸಲಾಯಿತು.
ರಾಜ್ಯಮಟ್ಟದ ಕವನ ಸ್ಪರ್ಧೆಗಳ ವಿಜೇತರಿಗೆ
ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಅಧ್ಯಕ್ಷೀಯ ಭಾಷಣ ಮಾಡಿದ ಎಲ್.ಎನ್.ಮುಕುಂದರಾಜ 'ಸ್ಲಂ ಕುನ್ನಿಗಳೆಂದು ಪರಿಗಣಿಸುವವರಿಗೆ ಸರಿಯಾದ ಉತ್ತರವನ್ನು ತಮ್ಮ ಸಾಧನೆಯ ಮೂಲಕ ಉತ್ತರಿಸಿದ್ದಾರೆ. ಸಾಮಾನ್ಯ ಜನರ ಜಯದ ದಿನಗಳು ಈ ಮೂಲಕ ಆರಂಭವಾಗಿದೆ ಖಂಡಿತ ಇದು ಮುಂದೊಂದು ದಿನದ ಶೋಷಿತ ಜನರ ಗೆಲ್ಲುವಿಗೆ ಮುನ್ನುಡಿ..' ಎಂದು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ನಂತರ ಪ್ರಶಸ್ತಿ ವಿಜೇತರು ಕವನವಾಚನವನ್ನು ಮಾಡಿದರು.
ಪಾಲ್ಗೊಂಡಿದ ಹಿತೈಷಿಗಳು ಧನ ಸಹಾಯವನ್ನು ನೀಡಿ ಭರವಸೆ ಪ್ರಶಂಸೆಗಳನ್ನು ವ್ಯಕ್ತಪಡಿಸಿದರು. ರುಚಿಯಾದ ಬಿಸಿಬೇಳೆ ಬಾತ್ ತಂಪಾದ ಮೊ ಬಂದವರ ನಾಲಿಗೆ ಮೇಲೆ ನಲಿದಾಡಿತು.
ಸಂಖ್ಯೆ ಕವನ ವಿಜೇತರು ಶ್ರೇಣಿ
2. ಮೌನಹಕ್ಕಿ - ಗೀತಾ ಬಿ ಸನದಿ - ದ್ವಿತೀಯ
3. ಅಹಲ್ಯೆಯ ಸ್ವಗತ - ದೀಪ್ತಿ ಹರ್ಷ ಎಸ್ ಡಬ್ಲ್ಯುಎಂಸಿ - ತೃತೀಯ
ಮೆಚ್ಚುಗೆ ಪಡೆದ ಹತ್ತು ಕವನಗಳು
1. ಅವ್ವಾ ನಿನ್ನ ನೆನಪಿನ್ಯಾಗ - ಶಂಕರ ವಿಭಾಳೆ
2. ನಾನು ನಾನಾಗಬೇಕು - ವಿದ್ಯಾ ಡಿ ಕದಂ
3. ಶೂನ್ಯ - ಶ್ರೀಮತಿ ವಾಸಂತಿ ಗಣೇಶ್
4. ಅವಳ ಕನಸಿನ ಕಾಮನಬಿಲ್ಲು - ಪದ್ಮ.ಸಿ
5. ನಾನು ಗೆಲ್ಲುತ್ತೇನೆ - ಶ್ರೀದೇವಿ ಕೆರೆಮನೆ
6. ಅವ್ವ - ರೇಣುಕಾ ಕೋಡಗುಂಟಿ
7. ಸೀತೆಗೊಂದು ಪ್ರಶ್ನೆ - ಅರುಣಾ ಹೆಬ್ರಿ
8. ದೀಪಾವಳಿ - ಶಾರದಮ್ಮ ಕಂಪಾಲಿ
9. ಸ್ವಗತ - ಸರಸ್ವತಿ ಭೂಷಣ್
10. ಮೂರು ಗೊಂಬೆಗಳು- ಸಂಧ್ಯಾ ಎಂ ನಾಯ್ಕ
ರಂಗೋಲಿ ಸ್ಪರ್ಧೆ ಫಲಿತಾಂಶ
ಕ್ರಮ ಸಂಖ್ಯೆ- ಹೆಸರು - ಫಲಿತಾಂಶ
1. ತೇಜಸ್ವಿನಿ - ಪ್ರಥಮ
2. ಪದ್ಮಿನಿ ಮಧುಸೂದನ್ - ದ್ವಿತೀಯ
3. ದೀಪಾ.ಆರ್ - ತೃತೀಯ
4. ಲಕ್ಷ್ಮಮ್ಮ ಇ - ನಾಲ್ಕನೇ
5. ದೀಪನ್ ಕುಮಾರ್ - ಐದನೇ
6. ಪಿ. ರಂಜಿತ - ಆರನೇ
7. ಜ.ಮು.ಚಂದ್ರ - ಏಳನೇ
8. ಆಶಾ - ಎಂಟನೇ
9. ತಿಲಕವತಿ - ಒಂಭತ್ತನೇ
10. ಲಲಿತಾಂಬ ಸಿ.ಆರ್ - ಹತ್ತನೇ
ಗೆರೆಗಳ ರಂಗೋಲಿ
ಶ್ರೀಮತಿ ಲಕ್ಷ್ಮಿ ಜಯರಾಮ್
ಕೆ.ಎಂ.ವೀಣಾ
ಗೀತಾ
ಸುಗುಣ ರಾಮಕೃಷ್ಣ
ಪ್ರಕೃತಿ ಕುರಿತ ನಗರ ಕವನ ಸ್ಪರ್ಧೆ
ಶ್ರೇಣಿ ಕವನ ವಿಜೇತರು -
1. ನಿಸರ್ಗದೇವಿ - ಆರ್.ರಂಗಲಕ್ಷ್ಮಿ - ಪ್ರಥಮ
2. ನವಗಾನ - ಮೃತ್ಯುಂಜಯ ಎಂ.ಸಾಲಿಮಠ್ - ದ್ವಿತೀಯ
3. ಕಾಲ - ರತ್ನಾ ನಾಗರಾಜ್ - ತೃತೀಯ
ಮೆಚ್ಚುಗೆ ಪಡೆದ ಹತ್ತು ಕವನಗಳು:
1. ತೆರೆ ತೆರೆಯ ತೀರದಾನಂದ - ಸುರೇಂದ್ರಕುಮಾರ್
2. ಆಗದಿರಲಿ ಹಿರೋಷಿಮಾ - ಪದ್ಮಾವತಿ ಚಂದ್ರು
3. ಹುಣ್ಣಿಮೆಯ ರಾತ್ರಿ - ಶೈಲದೇವರಾಜ್
4. - ನ.ಹ.ರಾಜು
5. ಪ್ರಕೃತಿ ವಿಕೃತಿ - ಶಾಂತಕುಮಾರ್ ಪೂಜಾರ್
6. ಜಲಲ ಜಲಲ ಜಲಧಾರೆ - ವಿಜಯಲಕ್ಷ್ಮೀ ಎಸ್.ಪಿ
7. ನಳನಳಸಿದೆ ಪ್ರಕೃತಿ - ಜಾಹ್ನವಿ ತೆಕ್ಕುಂಜ
8. ವಿಕೋಪ - ಸಿ.ಲಕ್ಷ್ಮಣ್
9. ಕ್ಷಮಿಸದಿರು ತಾಯಿ - ಗಂಗಾಚಾರಿ
10. ಸ್ವಾತಂತ್ರ್ಯ - ಬಿ.ಎಂ.ನಾಗಭೂಷಣ್
"ಮತ್ತೆ ಮತ್ತೆ ಈ ಬೆವರಿನ ಸಿರಿ ಚಿಗುರಲು ಬನ್ನಿ ಕೈ ಜೋಡಿಸಿ"


















