ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Wednesday, July 15, 2009

ನಮ್ಮ ಹೆಜ್ಜೆಗಳು



ನಮ್ಮ ಹೆಜ್ಜೆಗಳು
---


ಅರ್ಥಿಕವಾಗಿ ತೀವ್ರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ನಾವು ಧೈರ್ಯ ಬಿಡದೇ ಸಾಗುತ್ತಿದ್ದೇವೆ. ಬಡತನವೇ ಬಳುವಳಿಯಾಗಿ ಪಡೆದ ನಮ್ಮ ಸದಸ್ಯರು ಅದರಲ್ಲೂ ಹೆಣ್ಣುಮಕ್ಕಳು ನಾವು ಕೂತು ಚರ್ಚಿಸಲು ಸ್ಥಳವಿಲ್ಲದೇ ಪಾರ್ಕುಗಳಲ್ಲಿ ಕುಳಿತು ಚರ್ಚೆ ನಡೆಸುವ ಸಮಯದಲ್ಲೂ ಕುಗ್ಗದೇ ಈ ಸಮಾಜದಲ್ಲಿ ನಮ್ಮ ಸಣ್ಣ ಸಾಧನೆಗಳಿಗೆ ಕಾಣಿಕೆ ನೀದುತ್ತಿದ್ಧಾರೆ.




1. ರಾಜ್ಯದಲ್ಲೇ ಪ್ರಥಮವಾಗಿ 'ಮಾಹಿತಿ ಹಕ್ಕು ಜನಜಾಗೃತಿ ಕಾರ್ಯಕ್ರಮ' ನೆಡೆಸಿದ ಹೆಗ್ಗಳಿಕೆ ನಮ್ಮದು.







2. ಅಡೋಬ್ ನ ಸಹಯೋಗದೊಂದಿಗೆ ನಾವು ತಯಾರಿಸಿದ ಸಾಕ್ಷ್ಯಚಿತ್ರ ಬೀದಿಬದಿ ಹಲವು ಹೆಗ್ಗಳಿಕೆಗೆ ಪಾತ್ರವಾಗಿದೆ.

3. ನಮ್ಮ
ಸಂಸ್ಥೆಗಳ ಸಾಧನೆಗೆ ಈ ಸಂಸ್ಥೆಯ ಸಂಸ್ಥಾಪಕರಿಗೆ ಅಂಬಾ ಪ್ರಕಾಶನ ಯಳಂದೂರು ಚಾಮರಾಜನಗರ ಇವರು 'ಸುವರ್ಣ ಸಿರಿ ಕನ್ನಡಿಗ' ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸಿದ್ದಾರೆ.
4. ಪತ್ರಗಳ ಮೂಲಕದ ರಾಜ್ಯಮಟ್ಟದ ರಂಗೋಲಿ ಸ್ಪರ್ಧೆ ಹಾಗೂ ಬಡಮಕ್ಕಳಿಗೆ ಆಟಿಕೆಗಳನ್ನು ಪೂರೈಸುತ್ತಿರುವ ಹನಿಚೇತನ ಕಾರ್ಯಕ್ರಮಗಳು ಹೆಚ್ಚು ವಿಶಿಷ್ಟ, ವಿನೂತನವಾಗಿ ಜನಪ್ರಿಯವಾಗಿವೆ.

5. ನಾವು ನೆಡೆಸುತ್ತಿರುವ ಎಲ್ಲಾ ತರಬೇತಿ ಶಿಬಿರಗಳು ಉಚಿತವಾಗಿ ಹಾಗೂ ನುರಿತ ತಜ್ಞರಿಂದ ನೆಡೆಸಲ್ಪಡುತ್ತಿವೆ.

6. ಪಿ.ಯು.ಸಿ.ಎಲ್ ಸೇರಿದಂತೆ ಹಲವಾರು ಸಂಘಾಟನೆ ಗಳೊಂದಿಗೆ ಸೇರಿ ಮಾಡಿರುವ 'ಕಟ್ಟಡ ಕಾರ್ಮಿಕರ ಹಿತರಕ್ಷಣಾ ಕ್ರಿಯಾ ಸಮಿತಿ'ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ಸಂಸ್ಥೆಯ ಸಂಸ್ಥಾಪಕರೇ ಸಂಚಾಲಕರಾಗಿ ಕಟ್ಟಡ ಕಾರ್ಮಿಕರ ಅಪಘಾತಗಳ ಬಗ್ಗೆ ಸತ್ಯಶೋಧನೆ ಹಾಗೂ ಅವರ ಪರಿಹಾರ, ಹಕ್ಕುಗಳ ಬಗ್ಗೆ ಅಧ್ಯಯನ ಹಾಗೂ ಹೋರಾಟದಲ್ಲಿ ನಿರಂತರವಾಗಿ ದುಡಿಯುತ್ತಿದೆ.

'ಬನ್ನಿ ಪಾಲ್ಗೊಳ್ಳಿ ಯಶಸ್ಸು ಪಡೆಯೋಣ '

ಸ್ತ್ರೀ ಆಂದೋಲನ

ಸ್ತ್ರೀ ಆಂದೋಲನ

ಶಿಕ್ಷಣ

+
ಜಾಗೃತಿ
+
ಸುರಕ್ಷತೆ
+
ಸಂಘಟನೆ
+
ಹೋರಾಟ
=
ಸಬಲೀಕರಣ

ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಮಹಿಳಯರ ಪರವಾಗಿ ಸರ್ಕಾರ ಹಾಗೂ ಸರ್ಕಾರರೇತರ ಹಲವಾರು ಸಂಘ,ಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದರೂ, ಹಲವಾರು ಕಾನೂನುಗಳನ್ನು ಜಾರಿಗೆ ತಂದಿದ್ದರೂ ಸಹ ದಿನ ನಿತ್ಯ ಮಾಧ್ಯಮಗಳಲ್ಲಿ,ದಿನಪತ್ರಿಕೆಗಳಲ್ಲಿ ಹೆಣ್ಣಿನ ಮೇಲೆ ನೆಡೆಯುತ್ತಿರುವ ಆಸಿಡ್ ಧಾಳಿ, ಅತ್ಯಾಚಾರ, ಭ್ರೂಣಹತ್ಯೆ, ಒಂಟಿ ಮಹಿಳೆ ಯರ ಕೊಲೆಗಳು ಇತ್ಯಾಧಿ ವಿಕೃತ ಗಳು ಹಾಗು ನಾಗರೀಕ ಸಮಾಜ ತಲೆತಗ್ಗಿಸುವಂತಹ ಅಮಾನವೀಯ ಘಟನೆಗಳು ಪ್ರಕಟವಾಗುತ್ತಿವೆ. ಈ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಣ್ಣು ಈ ಎಲ್ಲವೂಗಳನ್ನು ಎದುರಿಸಲು ಆಕೆಯನ್ನು ತರಬೇತಿಗೊಳಿಸಿ, ಜಾಗೃತಿಮೂಡಿಸಿ ತಳಮಟ್ಟದಿಂದ ಸಂಘಟಿಸುವ ಮೂಲಕ ಹೆಣ್ಣನ್ನು ಸಬಲೀಕರಿಸಲು ಈ ಆಂದೋಲನವನ್ನು ಆರಂಭಿಸಲಾಗಿದೆ.
ಈ ನಿಟ್ಟಿನಲ್ಲಿ....
ಗಾರ್ಮೆಂಟ್ಸ್ ಹಾಗೂ ರಿಲೆಯನ್ಸ್ ಫ್ರಶ್ಗಳಲ್ಲಿನ ಮಹಿಳಾ ಕಾರ್ಮಿಕರ ಬಗ್ಗೆ ಅಧ್ಯಯನ ನೆಡೆಸಲಾಯಿತು. ನಿರುದ್ಯೋಗಿ ಹೆಣ್ಣುಮಕ್ಕಳಿಗೆ ಹಲವಾರು ತರಬೇತಿ ಶಿಬಿರಗಳನ್ನು ಏರ್ಪಡಿಸಲಾಯಿತು. ವರದಕ್ಷಿಣೆ ಹಾಗೂ ಕಿರುಕುಳಗಳಿಗೆ ಒಳಗಾದ ಹೆಣ್ಣುಮಕ್ಕಳಿಗೆ ಕಾನೂನಿ ಸಲಹೆ ಹಾಗೂ ಸಹಕಾರ ನೀಡಲಾಯಿತು. ಹಲವು ಮಹಿಳಾ ಕಾಲೇಜುಗಳಲ್ಲಿನ ಹೆಣ್ಣುಮಕ್ಕಳನ್ನು ಸಂಘಟಿಸಿಲಾಗಿದೆ. ಮಹಿಳಾ ಸದಸ್ಯರನ್ನು 'ಮಹಿಳಾ ಅಧ್ಯಯನ ಕೇಂದ್ರ'ಗಳು ಹಾಗೂ ಮಹಿಳಾಪರ ಚಿಂತಕರ ಸಂಪರ್ಕ ಸಾಧಿಸಲಾಗುತ್ತಿದೆ.


ಆಂದೋಲನದ ಸಂಕ್ಷಿಪ್ತ ಧ್ಯೇಯ ಮತ್ತು ಉದ್ದೇಶಗಳು

ಮಹಿಳೆಯರಿಗೆ ಅಗತ್ಯವಾದ ಶಿಕ್ಷಣ ನೀಡುವುದು ತಜ್ಞರಿಂದ ಹಕ್ಕು ಮತ್ತು ಕಾನೂನಿನ ಬಗ್ಗೆ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುವುದು .ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡುವುದು. ಶಾಲಾ-ಕಾಲೇಜು ಮತ್ತು ಉದ್ಯೋಗದಲ್ಲಿರುವ ಮಹಿಳೆಯರನ್ನು ಗುಂಪುಗೊಳಿಸಿ ಸಂಘಟಿಸುವುದು. ಮಹಿಳೆಯರೊಡನೆ ನೆಡೆಯುವ ಅಸಭ್ಯವರ್ತನೆ, ಲೈಂಗಿಕ ಕಿರುಕುಳಗಳನ್ನುಹಾಗೂ ಶೋಷಣೆಗಳನ್ನು ವಿರೋಧಿಸುವುದು ಹಾಗು ಕಾನೂನಿನ ರೀತಿ ಕ್ರಮಕ್ಕೆ ಹೋರಾಟ ನೆಡೆಸುವುದು. ಹೆಣ್ಣಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ದೈಹಿಕ ದೃಢತೆಯ ಶಿಕ್ಷಣ ನೀಡುವುದು. ಆಕೆ ಎದುರಿಸುವ ಆರೋಗ್ಯದ ಸಮಸ್ಯೆಗಳ ಬಗ್ಗೆ ನುರಿತ ವೈದ್ಯರಿಂದ ಸಲಹೆ ಅರಿವು ಮೂಡಿಸುವುದು. ಆಧುನಿಕ ತಂತ್ರಜ್ಞಾನ,ಬೀದಿನಾಟಕಗಳ,ಸಾಕ್ಷ್ಯಚಿತ್ರಗಳ ಮೂಲಕ ಹಾಗೂ ಮಹಿಳಾಪರವಾದ ಲೇಖನ,ವಾರ್ತಾ ಪತ್ರ ,ಬರವಣಿಗೆಗಳನ್ನು ಪ್ರಕಟಿಸಿ ಆ ಮೂಲಕ ಜಾಗೃತಿ ಮೂಡಿಸುವುದು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿಚಾರ ಸಂಕೀರ್ಣಗಳು,ಚರ್ಚಿಸಿ,ಸಮ್ಮೇಳನ,ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
'ಆಂದೋಲನದ ಅಡಿಗಲ್ಲುಗಳ ಜೋಡಿಸೋಣ ಬನ್ನಿ '

ಹನಿಚೇತನ



ಹನಿಚೇತನ






ಇಂದಿನ ಮಕ್ಕಳೇ ಮುಂದಿನ ಈ ಸಮಾಜ ಹಾಗೂ ಸಮಾಜದ ಬೆನ್ನೆಲುಬಾಗಿದ್ದು ನಾವು ಉತ್ತಮ ಸಮಾಜದ ಕನಸನ್ನು ಕಾಣುತ್ತೇವೆಂದರೆ ಮೊದಲು ಈಗಿನ ಮಕ್ಕಳನ್ನು ಉತ್ತಮರನ್ನಾಗಿ ಬೆಳೆಸಬೇಕಾಗಿದೆ.
ಈ ಕಾರ್ಯಕ್ರಮದಲ್ಲಿ....





'ವ್ಯಕ್ತಿತ್ವ ವಿಕಸನ ಹಾಗೂ ತರಬೇತಿ ಶಿಬಿರ'


  • ಬಡ ವಿದ್ಯಾರ್ಥಿಗಳು , ಸ್ಲಂ ಮಕ್ಕಳು ಹಾಗೂ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ 'ವ್ಯಕ್ತಿತ್ವ ವಿಕಸನ' ಕಾರ್ಯಕ್ರಮ, 'ಡ್ರಾಯಿಂಗ್' 'ಉಚಿತ ಇಂಗ್ಲೀಷ್ ತರಗತಿ'ಗಳನ್ನು ನೆಡೆಸಲಾಗುತ್ತಿದೆ. ಈ ಮೂಲಕ ಅವರ ಪ್ರತಿಭೆಯನ್ನು ಹೊರತರುವ ಪ್ರಯತ್ನ ಹಾಗೂ ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸಲಾಗುತ್ತಿದೆ.


  • ಕೆ.ಟಿ.ಎಸ್.ವಿ ಪ್ರೌಢಶಾಲೆ ರಾಜಾಜಿನಗರ ಬೆಂಗಳೂರು ಇಲ್ಲಿನ ಎಸ್.ಎಸ್,ಎಲ್.ಸಿ ವಿಧ್ಯಾರ್ಥಿಗಳಿಗೆ 'ಪರೀಕ್ಷಾ ಸಿದ್ದತೆ' ಬಗ್ಗೆ 2008 ಮಾರ್ಚ್ ನಲ್ಲಿ ತರಬೇತಿ ನೀಡಲಾಯಿತು.



  • ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ವ್ಯಕ್ತಿವಿಕಸನ ಶಿಬಿರಗಳನ್ನು ನೆಡೆಸಿಕೊಡಲಾಯಿತು.

  • ಚಿತ್ರಕಲಾ ಪರಿಷತ್ತ್ ನ ಭಾರ್ಗವಿಯವರಿಂದ 'ಚಿತ್ರಕಲೆ ತರಬೇತಿ'ಯನ್ನು ನೀಡಲಾಯಿತು. ಸ್ಲಂಗಳಲ್ಲಿನ ಮಕ್ಕಳಿಗೆ ಮನೆಪಾಠಗಳನ್ನು ನೆಡೆಸಲಾಯಿತು.


  • 2006-07ನೇ ಸಾಲಿನ ಎಸ್.ಎಸ್.ಎಲ್.ಸಿ ಸರ್ಕಾರಿ ಶಾಲೆ ಮಕ್ಕಳಿಗೆ 'ಉಚಿತ ಇಂಗ್ಲೀಷ್ ತರಬೇತಿ'ಯನ್ನು ನೆಡೆಸಲಾಯಿತು.



ನೆರವು :




ಮೂಲಭೂತ ಸೌಕರ್ಯಗಳನ್ನು, ಲೇಖನ ಸಾಮಗ್ರಿಗಳನ್ನು ಒದಗಿಸುತ್ತಾ ಉತ್ತೇಜಿಸುವ ಹಾಗೂ ಅವರ ಉತ್ತಮ ಕನಸುಗಳ ಭವಿಷ್ಯಕ್ಕೆ ಪೋಷಣೆ ನೀಡಲಾಗುತ್ತಿದೆ. ಪ್ರತಿವರ್ಷ ಹಲವಾರು ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಅರ್ಥಿಕ ನೆರವು ಹಾಗೂ ಲೇಖನ ಸಾಮಗ್ರಿಗಳನ್ನು ನೀಡಲಾಗುತ್ತಿದೆ.

ಕಾವ್ಯ ಚೇತನ

ಕಾವ್ಯ ಚೇತನ


ಸಮೃದ್ದ ಕನ್ನಡ ಭಾಷೆಯ ಸಾಹಿತ್ಯಲೋಕದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಹಾಗೂ ಯುವಜನರನ್ನು ಕಾವ್ಯಪ್ರಿಯರನ್ನು ಉತ್ತೇಜಿಸುವ ಉದ್ದೇಶದಿಂದ 'ಕಾವ್ಯಚೇತನ' ಘಟಕವನ್ನು ಸ್ಥಾಪಿಸಿದ್ದು ಈ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗ ಬೆಂಗಳೂರು ನಗರದಲ್ಲಿ ಸದಸ್ಯತ್ವವನ್ನು ಆರಂಭಿಸಿದ್ದು ಸುಮಾರು 100 ಕಾವ್ಯಪ್ರಿಯರು ಸದಸ್ಯರಾಗಿ ಸೇವೆಯಲ್ಲಿ ತೊಡಗಿದ್ದು ಸಾಹಿತ್ಯಕ್ಷೇತ್ರದಲ್ಲಿ ಸಾಧನೆಗೆ ಶ್ರಮಿಸುತ್ತಿದ್ದಾರೆ. ಆಸಕ್ತರು ಈ ಸಾಹಿತ್ಯಸೇವೆಯಲ್ಲಿ ತಮ್ಮ ಹೆಗಲು ಜೋಡಿಸಬಹುದು.
1. ರಾಜ್ಯಮಟ್ಟದ ಸ್ತ್ರೀ ಕುರಿತ ಕವನ ಸ್ಪರ್ಧೆಯನ್ನು ನಡೆಸಲಾಯಿತು.
2. ಮಹಿಳೆಯರಿಗಾಗಿ ರಾಜ್ಯ ಮಟ್ಟದ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
3. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 'ಪ್ರಕೃತಿ' ಕುರಿತು ಕವನ ಸ್ಪರ್ಧೆ ಗಳನ್ನೂ ನೆಡೆಸಲಾಯಿತು.
4. ಪ್ರತಿ ತಿಂಗಳಿಗೊಂದು 'ಕವನ ವಾಚನ' ಸ್ಲಂ ಜನರಲ್ಲಿ ಸಾಹಿತ್ಯಾಸಕ್ತಿಯನ್ನು ಮೂಢಿಸುವ ಕಾರ್ಯಕ್ರಮಗಳ ಮಾಡುವ ಉದ್ದೇಶವಿದೆ.


'ಸಾಹಿತ್ಯ ಸೃಜನತೆಯೊಂದಿಗೆ ಮಾನವೀಯತೆಯನ್ನು ಚೆಲ್ಲುವ ಬೆಳಕು'

ಯುವ ಚೇತನ

ಯುವಚೇತನ


ನಾಡಿನ ಬೆನ್ನೆಲುಬಾದ ಯುವಜನರಿಗೆ ಶಿಕ್ಷಣ,ಸ್ವಯಂಉದ್ಯೋಗ ತರಬೇತಿ ಹಾಗೂ ನೆರವು ನೀಡಿ ಸ್ವಾಭಿಮಾನಿಗಳಾಗಿ ಮಾಡಿ ಅವರಲ್ಲಿ ಸಮಾಜದ ಬಗ್ಗೆ ಉತ್ತಮ ಅರಿವು, ಅಭಿಮಾನಗಳನ್ನು ಮೂಡಿಸಿ ನಾಡಿನ ಏಳ್ಗೆಗೆ ಯುವಜನರನ್ನು ಸಂಘಟಿಸುವ ಕಾರ್ಯನಿರಂತರ ಮಾಡಲಾಗುತ್ತಿದೆ.

1. ರಾಜಾಜಿನಗರ ಬಿ.ಎಡ್ ಹಾಗೂ ಡಿ.ಎಡ್ ವಿದ್ಯಾರ್ಥಿಗಳಿಗೆ 'ವ್ಯಕ್ತಿವಿಕಸನ ತರಬೇತಿ'ಯನ್ನು ನೀಡಲಾಯಿತು.






2. ಬಡ ಯುವಕ,ಯುವತಿಯರಿಗೆ ಮಾಧ್ಯಮ ತರಬೇತಿಯನ್ನು ನೀಡಲಾಯಿತು.










3. ನಗರದ ವಿವಿಧ ಕಡೆ ದಲಿತ,ಹಿಂದುಳಿದ,ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಉಚಿತ ಇಂಗ್ಲೀಷ್ ತರಗತಿಗಳನ್ನು ನೆಡೆಸಿಕೊಡಲಾಗುತ್ತಿದೆ.






4. ಯುವಜನರಿಗೆ ಪತ್ರಿಕೋದ್ಯಮ ತರಗತಿಗಳನ್ನು ನೆಡೆಸಲಾಯಿತು.





5. 2006-07ನೇ ಸಾಲಿನಲ್ಲಿ 10 ಬಡ ಯುವಕ-ಯುವತಿಯರಿಗೆ 'ಪ್ರಕೃತಿ ಎನ್.ಬನವಾಸಿ' ಇಂಗ್ಲೀಷ್ ಕಲಿಕಾಕೇಂದ್ರದಲ್ಲಿ ಒಂದು ತಿಂಗಳ ತರಬೇತಿ ಕೊಡಿಸಲಾಯಿತು.



6. ಗಿರೀಶ್.ಎಲ್ ಎಂಬ ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶಧನ ನೀಡಲಾಯಿತು.







7. ಅಶೋಕಪುರಂ ಯೂತ್ ಅಸೋಸಿಯೇಷನ್ ಜೊತೆಗೂಡಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.









8. 'ಕಮ್ಯುನಿಕೇಶನ್ ಇಂಗ್ಲೀಷ್' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.








'ಬನ್ನಿ ಯುವಜನರೇ ದೇಶ ಕಟ್ಟುವ ಕೆಲಸ ಹೆಗಲ ಮೇಲಿದೆ.ಭ್ರಷ್ಟಾಚಾರ, ಅಸಮಾನತೆಯಿಂದ ಕುದಿಯುತ್ತಿರುವುದು ಸಾಕು. ನಮ್ಮ ನೆಲ,ಜಲ,ಸಂಸ್ಕೃತಿಯನ್ನು ರಕ್ಷಿಸೋಣ'

ಬೊಂಬೆ ಮನೆ




ಬೊಂಬೆಮನೆ



ಆರ್ಥಿಕವಾಗಿ ದುರ್ಬಲರಾದ ಬಡಮಕ್ಕಳು ಆಡಲು ಉತ್ತಮವಾದ ಆಟಿಕೆಗಳು ಸಿಗದೇ ಅಪಾಯಕಾರಿ ವಸ್ತುಗಳೊಂದಿಗೆ ಆಡುವುದು ಹಾಗೂ ದುಶ್ಚಟಗಳಿಗೆ ಬಲಿಯಾಗುವುದಕ್ಕೆ ಮೂಲ ಕಾರಣವಾಗಿದೆ. ಆದ್ದರಿಂದ ಅವರಿಗೆ ಉತ್ತಮವಾದ ಆಟಿಕೆಗಳನ್ನು ಪೂರೈಸಲಾಗುತ್ತಿದೆ. ಆ ಮೂಲಕ ಅವರ ಸಮಯ ಹಾಗೂ ಅವರ ಕಲಿಯುವ ಆಸಕ್ತಿಯನ್ನು ಉತ್ತಮಗೊಳಿಸಲು ಅವಕಾಶ ಒದಗಿಸಲಾಗುತ್ತಿದೆ.




1. ದಿನಾಂಕ 16-4-08 ರಂದು 'ಗೌತಮ ಕಾಲೋನಿ' ಸ್ಲಂಮಕ್ಕಳಿಗೆ ಆಟಿಕೆಗಳನ್ನು ಹಾಗೂ ಸಿಹಿಯನ್ನು ವಿತರಿಸಲಾಯಿತು.



2. ಬೆಂಗಳೂರಿನ 'ವಿವೇಕ ಮೆಮಾರಿಯಲ್ ಟ್ರಸ್ಟ್' ಇವರ ಸಹಕಾರದೊಂದಿಗೆ ದಿನಾಂಕ 29-05-08 ರಿಂದ 30-06-೦8 ವರೆಗೆ ಶಿವಮೊಗ ' ಮಾಧವನೆಲೆ ' ಚಿಂದಿ ಆಯುವ ಮಕ್ಕಳ ಪುರ್ನವಸತಿ ಕೇಂದ್ರದಲ್ಲಿ . ಇಲ್ಲಿ 2 ದಿನಗಳ 'ವ್ಯಕ್ತಿತ್ವ ವಿಕಸನ' ಕಾರ್ಯಕ್ರಮ, ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನೆಡೆಸಿಕೊಡಲಾಯಿತು ಹಾಗೂ ಮಕ್ಕಳಿಗೆ ಪುಸ್ತಕ, ಲೇಖನ ಸಾಮಗ್ರಿಗಳು ಹಾಗೂ ಸಿಹಿಯನ್ನು ಹಂಚಲಾಯಿತು.






ನಿಮ್ಮಲೊಂದು ಮನವಿ:






ನಿಮ್ಮ ಮನೆಯಲ್ಲಿರುವ 'ಮಕ್ಕಳ ಆಟಿಕೆಗಳು', ಬಟ್ಟೆ, ಪುಸ್ತಕ ಇತ್ಯಾಧಿಗಳನ್ನು ಸಂಸ್ಥೆಗೆ ನೀಡಿ ಬಡಮಕ್ಕಳ ಆಸೆಗೆ ಆಸರೆಯಾಗಿ. ಬಡಮಕ್ಕಳಿಗೆಂದು ನಿರ್ಮಿಸಲು ನಿರ್ಧರಿಸಿರುವ 'ಆಟದ ಮನೆ' ಹಾಗೂ 'ಕಂಪ್ಯೂಟರ್ ಕಲಿಕಾ ಕೇಂದ್ರ'ಗಳಿಗೆ ನಿಮ್ಮ ಕಾಣಿಕೆಯನ್ನು ನೀಡಿ. ನಿಮಗೆ ಗೊತ್ತಿರುವ ವಿದ್ಯೆಯನ್ನು ಬೋಧಿಸಿ ಬನ್ನಿ.





'ನಾವು ಮಾಡುತ್ತಿರುವುದು ದಾನವಲ್ಲ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಸಹಕಾರ'

ನಾವು


:ಪರಿಚಯ:



ಚೇತನಧಾರೆಟ್ರಸ್ಟ್ ಮತ್ತು ಜನಾಸ್ತ್ರ ಸಂಸ್ಥೆಗಳು ಯಾವುದೇ ವರ್ಗಸೀಮಿತವಲ್ಲದ,ಲಾಭಾಪೇಕ್ಷೆಯಿಲ್ಲದ,ರಾಜಕೀಯ ದುರುದ್ದೇಶವಿಲ್ಲದ ಸ್ವಯಂಸೇವಾ ಸಂಸ್ಥೆಗಳಾಗಿದ್ದು ಸ್ಲಂಜನರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರೂ ಸೇರಿದಂತೆ ಶೋಷಿತವರ್ಗಗಳ ಕ್ಷೇಮಾಭಿವೃದ್ದಿಗಾಗಿ ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು, ಯುವಕರು, ಬುದ್ದಿಜೀವಿಗಳ ಜೊತೆಗೂಡಿ ಹಲವಾರು ಕಾರ್ಯಕ್ರಮಗಳನ್ನು ನೆಡೆಸುತ್ತಿವೆ.

ಸಂಪರ್ಕ

ಸಂಪರ್ಕ:

ಚೇತನಧಾರೆ

ನಂ.10,2ನೇ ಅಡ್ಡರಸ್ತೆ,

ಇಸ್ಕಾನ್ ದೇವಾಲಯದ ಮುಂಭಾಗ

ಯಶವಂತಪುರ, ಬೆಂಗಳೂರು-560022.

ಸಂಪರ್ಕ ಸಂಖ್ಯೆ: 9448702368.
Email: asthra.janasthra@gmail.com

Thursday, July 2, 2009

ಬೆವರ ಸಿರಿ

(ಈ ಕಾರ್ಯ ಕ್ರಮದ ಬಗ್ಗೆಗಿನ 'ಉದಯವಾಣಿ' ಪತ್ರಿಕೆಯ ಮುನ್ನುಡಿಯನ್ನು ನೋಡಿ)
Please visit this page http://www.udayavani.com/showstory.asp?news=0&contentid=621546&lang=2



ಬೆವರ ಸಿರಿ

..ದುಡಿಯುವ ಜನರ ಬೆವರು ಸಿರಿಯಾಗಿ


ನಮ್ಮ ಶ್ರೀಮಂತ ಸಮಾಜದಲ್ಲಿ ನಿರ್ಲಕ್ಷ್ಯಗೊಳಗಾಗಿ ಸರ್ಕಾರಿ ಶಾಲೆಗಳಲ್ಲಿ 5-6ನೇ ತರಗತಿ ಓದಿ ಬಡತನ ಹಾಗೂ ಇತರ ಕಾರಣಗಳಿಗೆ ಶಾಲೆ ಬಿಟ್ಟು ಮನೆಯ ಬಡತನಕ್ಕೆಮೂಟೆ ಹೊರುವ,ಕಾರು ತೊಳೆಯುವ, ಗಾರೆ ಕೆಲಸ, ಪಾನಿಪುರಿ ಗಾಡಿಗಳಲ್ಲಿ ಪ್ಲೇಟ್ ತೊಳೆವ, ಗ್ಯಾರೆಜ, ಮನೆಕೆಲಸಗಳಲ್ಲಿ, ಬ್ಯೂಟಿಪಾರ್ಲರ್ಗಳಲ್ಲಿ ಕೂಲಿ ಕೆಲಸಗಳನ್ನು ಮಾಡುತ್ತಾ ಗೌರವದಿಂದ ಎದೆಯುಬ್ಬಿಸಿ ದುಡಿಯುತ್ತಿರುವ ಸ್ಲಮ್ ನ ಯುವಕ ಯುವತಿಯರು ಹಸಿವಿನೊಡನೆ ಹೋರಾಡುತ್ತಾ ಬಿಡುವು ಸಿಕ್ಕಾಗ ತಮ್ಮನ್ನು ನಿರ್ಲಕ್ಷ್ಯಿಸಿದ ಸಮಾಜದಲ್ಲಿ ಸರ್ವ ಸಮಾನತೆಯ ಕನಸಿಗಾಗಿ ಚೇತನಧಾರೆ ಮತ್ತು ಜನಾಸ್ತ್ರ ಸಂಘಟನೆಗಳನ್ನು ಹುಟ್ಟುಹಾಕಿ ಪ್ರಜ್ಞಾವಂತ ಸಮಾಜ ಹೆಮ್ಮೆಯಿಂದ ನೂದುವಂತೆ ಯಾವುದೇ ವರ್ಗಸೀಮಿತವಲ್ಲದ,ಲಾಭಾಪೇಕ್ಷೆಯಿಲ್ಲದ,ರಾಜಕೀಯ ದುರುದ್ದೇಶವಿಲ್ಲದ ಸ್ಲಂಜನರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರೂ ಸೇರಿದಂತೆ ಶೋಷಿತವರ್ಗಗಳ ಕ್ಷೇಮಾಭಿವೃದ್ದಿಗಾಗಿ ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ವಿಧ್ಯಾರ್ಥಿಗಳು, ಯುವಕರು, ಬುದ್ದಿಜೀವಿಗಳ ಜೊತೆಗೂಡಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಸ್ವಾರ್ಥ ಪುರುಷ ಪ್ರಧಾನ ಸಮಾಜದ ನಿರಂತರ ಶೋಷಿತ ಹೆಣ್ಣಿನ ಒಳಗುದಿಯನ್ನು ಹೊರತೆಗೆಯಲು "ರಾಜ್ಯ ಮಟ್ಟದ ಸ್ತ್ರೀ ಕುರಿತ ಬಂಡಾಯ ಕವನ ಸ್ಪರ್ಧೆ" ಹಾಗೂ "ರಾಜ್ಯ ಮಟ್ಟದ ರಂಗೋಲಿ ಸ್ಪರ್ಧೆಗಳನ್ನು"
ಏರ್ಪಡಿಸಿ ಖ್ಯಾತ ಸಾಹಿತಿಗಳಿಂದ ಆಯ್ಕೆ ಪ್ರಕ್ರಿಯೆ ಮುಗಿಸಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಬಡತನದ ಬೂದಿಯಲಿ ಮುಚ್ಚಿಹೋದ ಪ್ರತಿಭೆಗಳಿಗೆ ಸನ್ಮಾನ ಸಮಾರಂಭ ಬೆವರಸಿರಿಯನ್ನು
ದಿನಾಂಕ:1-3-೨೦೦೯ರಂದು ಭಾನುವಾರ ನಗರದ ಶಾಸಕರ ಭವನದಲ್ಲಿ ಆಯೋಜಿಸಲಾಯಿತು.


ಅಧ್ಯಕ್ಷತೆ: ಡಾ.ಬಂಜಗೆರೆ ಜಯಪ್ರಕಾಶ ಖ್ಯಾತ ಸಾಹಿತಿಗಳು ಇವರ ಗೈರು ಹಾಜರಿಯಲ್ಲಿ
ಎಲ್.ಎನ್.ಮುಕುಂದರಾಜ್ ಕವಿಗಳು ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳು: ಬಿ.ಟಿ.ಲಲಿತಾನಾಯಕ್ ಮಾಜಿ ಸಚಿವರು ಹಾಗೂ ಬರಹಗಾರರು
ಪ್ರತಿಭಾನಂದಕುಮಾರ್ ಸಾಹಿತಿಗಳು ಹಾಗೂ ಪತ್ರಕರ್ತರು


ಕಾರ್ಯಕ್ರಮ ವಿವರ:

ಉದ್ಭಾಟನೆ: ಚೇತನಧಾರೆ ಹಾಗೂ ಜನಾಸ್ತ್ರ ಸಂಘಟನೆ ಸದಸ್ಯರಾದ ಸತ್ಯರಾಜ್ ಹಾಗೂ ಅತಿಥಿಗಳು ಉದ್ಭಾಟನೆ ಮಾಡಿದರು. ಸಂಘಟನೆಯ ಗೋಪಾಲ್, ಮೀನಾಶ್ರೀ, ಪ್ರಸಾದ್, ರಾಜೇಶ್ವರಿ, ತೇಜಾಕರ್ಶಿಣಿ 'ಜೋಗದ ಸಿರಿ..'ಯ ಮೂಲಕ ಉದ್ಭಾಟನೆಗೆ ದನಿ ಸೇರಿಸಿದರು.

ಸಂಘಟನೆಯ ಸಂಚಾಲಕರಾದ ಆದಿತ್ಯರವರು ಪ್ರಾಸ್ತಾವಿಕ ಭಾಷಣವನ್ನು, ಸಂಘಟನೆಯ ಉದ್ದೇಶ ಹಾಗೂ ಬೆವರಸಿರಿ ಕಾರ್ಯಕ್ರಮದ ಅಗತ್ಯವನ್ನು ಹೇಳಿದರು.

ಸನ್ಮಾನ:

1. ಸುಮಾರು 300ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿರುವ ಬೆಂಗಳೂರಿನ ವಿನಾಯಕ ಸ್ಲಂನ ಸಾಂಪ್ರದಾಯಿಕ ಪ್ರಸೂತಿ ತಜ್ಞೆ ಮಾಣಿಕ್ಯಮ್ಮ ರವರನ್ನು ಸನ್ಮಾನಿಸಲಾಯಿತು.

2. ತುಮಕೂರಿನ ಬುಲ್ ಬುಲ್ ತಾರ ವಾದಕ ಉಸ್ತಾದ್ ಅಬ್ದುಲ್ ಕಲಾಂ ರವರನ್ನು ಸನ್ಮಾನಿಸಲಾಯಿತು.







ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ತಮ್ಮ ಹಿತನುಡಿಗಳನ್ನು ಹೇಳುತ್ತಾ 'ಸಂಘಟನೆಯ ಯುವಕರು ಹಾಗೂ ಅವರ ಸಾಧನೆಯ ಬಗ್ಗೆ ಹೆಮ್ಮೆಯನ್ನು ಸೂಚಿಸಿದರು. ಹಾಗೂ ಆದಿತ್ಯರವರ ಕಪ್ಪು ಹಕ್ಕಿಯ ಹಾಡು ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯಮಟ್ಟದ ಕವನ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತೆ ಪ್ರತಿಭಾನಂದಕುಮಾರ್ ಸಂಘಟನೆಯ ಸಾಧನೆಯನ್ನು ಪ್ರಶಂಸಿದರು. ಸಂಘಟನೆಯ ಮುಂದಿನ ಹೋರಾಟಗಳಲ್ಲಿ ತಾವೂ ಪಾಲ್ಗೊಂಡು ಅಗತ್ಯವಾದ ಎಲ್ಲಾ ಸಹಕಾರಗಳನ್ನು ನೀಡುವುದಾಗಿ ತಿಳಿಸಿದರು. ಸಂಘಟನೆಯ ಸದಸ್ಯರು ತಮ್ಮ ಬಗ್ಗೆಗಿನ ಕೀಳಿರಿಮೆಯನ್ನು ಬಿಡಬೇಕೆಂದು ಹೇಳಿದರು.

ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಅಧ್ಯಕ್ಷೀಯ ಭಾಷಣ ಮಾಡಿದ ಎಲ್.ಎನ್.ಮುಕುಂದರಾಜ 'ಸ್ಲಂ ಕುನ್ನಿಗಳೆಂದು ಪರಿಗಣಿಸುವವರಿಗೆ ಸರಿಯಾದ ಉತ್ತರವನ್ನು ತಮ್ಮ ಸಾಧನೆಯ ಮೂಲಕ ಉತ್ತರಿಸಿದ್ದಾರೆ. ಸಾಮಾನ್ಯ ಜನರ ಜಯದ ದಿನಗಳು ಈ ಮೂಲಕ ಆರಂಭವಾಗಿದೆ ಖಂಡಿತ ಇದು ಮುಂದೊಂದು ದಿನದ ಶೋಷಿತ ಜನರ ಗೆಲ್ಲುವಿಗೆ ಮುನ್ನುಡಿ..' ಎಂದು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ನಂತರ ಪ್ರಶಸ್ತಿ ವಿಜೇತರು ಕವನವಾಚನವನ್ನು ಮಾಡಿದರು.

ಕೆಸ್ತಾರ ಹಾಗೂ ಸಂಗಡಿಗರು 'ಕಟ್ಟುತೇವ ನಾವು..' ಹಾಡನ್ನು ಹಾಡಿದರು.

ಬುಲ್ ಬುಲ್ ತಾರ ವಾದಕ ಉಸ್ತಾದ್ ಅಬ್ದುಲ್ ಕಲಾಂರವರು ತಮ್ಮ ವಾದನದಿಂದ ಎಲ್ಲರನ್ನೂ ರಂಜಿಸಿದರು.


ನಮ್ಮ ಸಂಘಟನೆ ಸತ್ಯರಾಜ 'ನಾವು ಹಲವಾರು ತಪ್ಪುಗಳನ್ನು ಮಾಡಿದ್ದೇವೆ ನಮ್ಮನ್ನು ಕ್ಷಮಿಸಿ ನಮ್ಮ ಮುಂದಿನ ಹೋರಾಟಗಳಿಗೆ ಜೊತೆಯಾಗಿ ಒಳ್ಳೇ ಸಮಾಜ ನಿರ್ಮಾಣ ಮಾಡೋಣ..' ಎಂದು ಕರೆ ನೀಡಿದರು. ಸಂಘಟನೆಯ ಸದಸ್ಯರಾದ ಶ್ರೀನಿವಾಸ್ ವಂದನಾರ್ಪಣೆ ಸಲ್ಲಿಸಿದರು.




ಪಾಲ್ಗೊಂಡಿದ ಹಿತೈಷಿಗಳು ಧನ ಸಹಾಯವನ್ನು ನೀಡಿ ಭರವಸೆ ಪ್ರಶಂಸೆಗಳನ್ನು ವ್ಯಕ್ತಪಡಿಸಿದರು. ರುಚಿಯಾದ ಬಿಸಿಬೇಳೆ ಬಾತ್ ತಂಪಾದ ಮೊ ಬಂದವರ ನಾಲಿಗೆ ಮೇಲೆ ನಲಿದಾಡಿತು.

ರಾಜ್ಯ ಮಟ್ಟದ ಸ್ತ್ರೀ ಕುರಿತ ಕವನ ಸ್ಪರ್ಧೆಯ ಫಲಿತಾಂಶ
ಸಂಖ್ಯೆ ಕವನ ವಿಜೇತರು ಶ್ರೇಣಿ
1. ಒಕ್ಕಣಿನ ರಾಕ್ಷಸರು - ಮಮತ ಅರಸಿಕೆರೆ - ಪ್ರಥಮ
2. ಮೌನಹಕ್ಕಿ - ಗೀತಾ ಬಿ ಸನದಿ - ದ್ವಿತೀಯ
3. ಅಹಲ್ಯೆಯ ಸ್ವಗತ - ದೀಪ್ತಿ ಹರ್ಷ ಎಸ್ ಡಬ್ಲ್ಯುಎಂಸಿ - ತೃತೀಯ


ಮೆಚ್ಚುಗೆ ಪಡೆದ ಹತ್ತು ಕವನಗಳು
1. ಅವ್ವಾ ನಿನ್ನ ನೆನಪಿನ್ಯಾಗ - ಶಂಕರ ವಿಭಾಳೆ
2. ನಾನು ನಾನಾಗಬೇಕು - ವಿದ್ಯಾ ಡಿ ಕದಂ
3. ಶೂನ್ಯ - ಶ್ರೀಮತಿ ವಾಸಂತಿ ಗಣೇಶ್
4. ಅವಳ ಕನಸಿನ ಕಾಮನಬಿಲ್ಲು - ಪದ್ಮ.ಸಿ
5. ನಾನು ಗೆಲ್ಲುತ್ತೇನೆ - ಶ್ರೀದೇವಿ ಕೆರೆಮನೆ
6. ಅವ್ವ - ರೇಣುಕಾ ಕೋಡಗುಂಟಿ
7. ಸೀತೆಗೊಂದು ಪ್ರಶ್ನೆ - ಅರುಣಾ ಹೆಬ್ರಿ
8. ದೀಪಾವಳಿ - ಶಾರದಮ್ಮ ಕಂಪಾಲಿ
9. ಸ್ವಗತ - ಸರಸ್ವತಿ ಭೂಷಣ್
10. ಮೂರು ಗೊಂಬೆಗಳು- ಸಂಧ್ಯಾ ಎಂ ನಾಯ್ಕ

ರಂಗೋಲಿ ಸ್ಪರ್ಧೆ ಫಲಿತಾಂಶ
ಕ್ರಮ ಸಂಖ್ಯೆ- ಹೆಸರು - ಫಲಿತಾಂಶ
1. ತೇಜಸ್ವಿನಿ - ಪ್ರಥಮ
2. ಪದ್ಮಿನಿ ಮಧುಸೂದನ್ - ದ್ವಿತೀಯ
3. ದೀಪಾ.ಆರ್ - ತೃತೀಯ
4. ಲಕ್ಷ್ಮಮ್ಮ ಇ - ನಾಲ್ಕನೇ
5. ದೀಪನ್ ಕುಮಾರ್ - ಐದನೇ
6. ಪಿ. ರಂಜಿತ - ಆರನೇ
7. ಜ.ಮು.ಚಂದ್ರ - ಏಳನೇ
8. ಆಶಾ - ಎಂಟನೇ
9. ತಿಲಕವತಿ - ಒಂಭತ್ತನೇ
10. ಲಲಿತಾಂಬ ಸಿ.ಆರ್ - ಹತ್ತನೇ
ಗೆರೆಗಳ ರಂಗೋಲಿ
ಶ್ರೀಮತಿ ಲಕ್ಷ್ಮಿ ಜಯರಾಮ್
ಕೆ.ಎಂ.ವೀಣಾ
ಗೀತಾ
ಸುಗುಣ ರಾಮಕೃಷ್ಣ

ಪ್ರಕೃತಿ ಕುರಿತ ನಗರ ಕವನ ಸ್ಪರ್ಧೆ
ಶ್ರೇಣಿ ಕವನ ವಿಜೇತರು -

1. ನಿಸರ್ಗದೇವಿ - ಆರ್.ರಂಗಲಕ್ಷ್ಮಿ - ಪ್ರಥಮ
2. ನವಗಾನ - ಮೃತ್ಯುಂಜಯ ಎಂ.ಸಾಲಿಮಠ್ - ದ್ವಿತೀಯ
3. ಕಾಲ - ರತ್ನಾ ನಾಗರಾಜ್ - ತೃತೀಯ

ಮೆಚ್ಚುಗೆ ಪಡೆದ ಹತ್ತು ಕವನಗಳು:

1. ತೆರೆ ತೆರೆಯ ತೀರದಾನಂದ - ಸುರೇಂದ್ರಕುಮಾರ್
2. ಆಗದಿರಲಿ ಹಿರೋಷಿಮಾ - ಪದ್ಮಾವತಿ ಚಂದ್ರು
3. ಹುಣ್ಣಿಮೆಯ ರಾತ್ರಿ - ಶೈಲದೇವರಾಜ್
4. - ನ.ಹ.ರಾಜು
5. ಪ್ರಕೃತಿ ವಿಕೃತಿ - ಶಾಂತಕುಮಾರ್ ಪೂಜಾರ್
6. ಜಲಲ ಜಲಲ ಜಲಧಾರೆ - ವಿಜಯಲಕ್ಷ್ಮೀ ಎಸ್.ಪಿ
7. ನಳನಳಸಿದೆ ಪ್ರಕೃತಿ - ಜಾಹ್ನವಿ ತೆಕ್ಕುಂಜ
8. ವಿಕೋಪ - ಸಿ.ಲಕ್ಷ್ಮಣ್
9. ಕ್ಷಮಿಸದಿರು ತಾಯಿ - ಗಂಗಾಚಾರಿ
10. ಸ್ವಾತಂತ್ರ್ಯ - ಬಿ.ಎಂ.ನಾಗಭೂಷಣ್

"ಮತ್ತೆ ಮತ್ತೆ ಬೆವರಿನ ಸಿರಿ ಚಿಗುರಲು ಬನ್ನಿ ಕೈ ಜೋಡಿಸಿ"