ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Monday, July 5, 2010

By The Road Side

This Documentary Directed and Made by Janasthra Group on Media Training. Please give your comments..

Tuesday, April 13, 2010

Mock Press Meet



ಅಣುಕು ಪತ್ರಿಕಾಗೋಷ್ಠಿ

ನಾವು ಒಂದಷ್ಟು ವರದಿ ಮಾಡುವುದು ಕಲಿತೆವು ಈಗ ಒಂದು ಘಟನೆ ಅಥವಾ ವರದಿ ಸುದ್ದಿಯಾಗುವುದು ಹೇಗೆ? ವರದಿಯನ್ನು ಹೇಗೆ ಸಂಪಾದಿಸುತ್ತಾರೆ? ಪತ್ರಿಕೆ ಕಛೇರಿಗಳಲ್ಲಿ ಹೇಗೆ ಅದು ಅಚ್ಚಾಗುತ್ತದೆ?
ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ವರದಿಗಾರರು ಪತ್ರಿಕಾಗೋಷ್ಠಿಗಳಲ್ಲಿ ಸುದ್ದಿಯನ್ನು ಸಂಗ್ರಹಿಸುವುದು ಗೊತ್ತಿತ್ತು. ಅಲ್ಲಿ ಮಾಧ್ಯಮದವರಿಗೆ ಹಾಗೂ ಪತ್ರಿಕಾಗೋಷ್ಠಿಯನ್ನು ನಡೆಸುವವರಿಗೆ ಮಾತ್ರ ಪ್ರವೇಶವೆಂದು ತಿಳಿದು ಬೇಸರವಾಯಿತು.
ಕರ್ನಾಟಕದಲ್ಲಿ ಹೆಚ್ಚು ಪ್ರಚಾರದಲ್ಲಿರುವ ಪ್ರಜಾವಾಣಿ  ಪತ್ರಿಕೆ ಕಛೇರಿಗೆ ಭೇಟಿನೀಡಿ ಕಲಿಯೋಣವೆಂದು ನಿರ್ಧರಿಸಿದೆವು. ಅವಕಾಶ ಸಿಗುವುದೋ ಇಲ್ಲವೋ? ಎಂಬ ಅನುಮಾನದೊಂದಿಗೆ ಸಂಪಾದಕರಿಗೆ ಫೋನ್ ಮಾಡಿದೆವು. ಸಂಪಾದಕರು ಕೂಡಲೇ ಮೆಚ್ಚುಗೆಯಿಂದ ಒಪ್ಪಿ ನ್ಯೂಸ್ ಚೀಫ್ ಸತ್ಯನಾರಾಯಣ್ ಸಾರ್ರವರೊಂದಿಗೆ ಮಾತನಾಡಿ ದಿನಾಂಕವನ್ನು ಗೊತ್ತುಪಡಿಸಲು ಹೇಳಿದರು. ನಮಗೆ ತುಂಬಾ ಸಂತೋಷವಾಯಿತು.

 
ಪ್ರೆಸ್ ಕ್ಲಬ್ನಲ್ಲಿ ಭಾನುವಾರದಂದು ತರಬೇತಿಯನ್ನು ಪಡೆಯುತ್ತೇವೆ ಎಂದಾಗ ಕಾರ್ಯದರ್ಶಿಮಲ್ಲಪ್ಪನವರು ಅಂದು ಯಾವ ಪತ್ರಿಕಾಗೋಷ್ಠಿಯೂ ಇರುವುದಿಲ್ಲ. ಸುಮ್ಮನೆ ಬಂದು ಏನುಮಾಡುತ್ತೀರಿ ಎಂದು ಪ್ರಶ್ನಿಸಿದರು. ಅದು ನಮಗೂ ದೊಡ್ಡ ಪ್ರಶ್ನೆಯಾಯಿತು.

 
ನಾವು ಎದೆಗುಂದಲಿಲ್ಲ.. ಕೂಡಲೇ ಭ್ರಷ್ಟಾಚಾರದ ವಿರುದ್ಧ ನಾವೇ ಒಂದು ಅಣುಕು ಪತ್ರಿಕಾಗೋಷ್ಠಿಯನ್ನು ನಡೆಸಲು ತೀಮರ್ಾನಿಸಿ ಇತರ ಮಾಧ್ಯಮ ಮಿತ್ರರಿಗೆ ಆಹ್ವಾನಿಸಿದೆವು.

 ಅಂದು..

 ಬೆಳಿಗ್ಗೆಯೇ ಎಲ್ಲಾ ಗೆಳೆಯರೂ ಸೇರಿಕೊಂಡು ಮತ್ತೊಮ್ಮೆ ತರಬೇತಿಯನ್ನು ಮೆಲುಕು ಹಾಕಿದೆವು. ನಮ್ಮ ಗೆಳೆಯರೇ ಡ್ರೈವರ್ ಕೆಲಸಗಳನ್ನು ಮಾಡುವ ವಾಹನ ಆಟೋಗಳಿಗೆ ತಲಾ 20ರೂಗಳನ್ನು ನೀಡಿ ಡಿಸೇಲ್ ತುಂಬಿಸಿಕೊಂಡು ಪ್ರೆಸ್  ಕ್ಲಬ್ ಕಡೆ ಹೊರೆಟೆವು.


ಗೋಷ್ಠಿಯನ್ನು ನಡೆಸಿಕೊಡುವ ಗೆಳೆಯರ ಎದೆಗಳಲ್ಲಿ ನಡುಕ ಆರಂಭವಾಯಿತು. ಪ್ರೆಸ್ ಕ್ಲಬ್ನ ಎದುರಿಗಿರುವ ಕಬ್ಬನ್ ಪಾರ್ಕಿನಲ್ಲಿ ಕುಳಿತು ಮತ್ತೊಮ್ಮೆ ತಯಾರಿ ನಡೆಸಿ ಧೈರ್ಯದಿಂದ ಗೋಷ್ಠಿಯ ಕಡೆಗೆ ಹೊರೆಟೆವು

.
10.30ಕ್ಕೆ ಎಂದು ಹೇಳಿದ್ದ ಪತ್ರಿಕಾಗೋಷ್ಠಿಗೆ 11ಗಂಟೆಯಾದರು ಯಾವುದೇ ಮಾಧ್ಯಮದವರು ಬರಲಿಲ್ಲ. ಇದ್ದವರು ನಮ್ಮದೇ ತಂಡದ ವರದಿಗಾರರು. ಸರಿ.. ಗೋಷ್ಠಿ ಆರಂಭಿಸಿದೆವು. ಗೋಷ್ಠಿ ಆರಂಭವಾಗುತ್ತಿದ್ದಂತೇ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಹಾಗೂ ಸಂಜೆವಾಣಿ ಪತ್ರಿಕೆಯ ಇಬ್ಬರು ವರದಿಗಾರ್ತಿಯರು ನಮ್ಮನ್ನು ಸೇರಿಕೊಂಡರು. ನಮಗೆ ಒಂದಷ್ಟು ಹುಮ್ಮಸ್ಸು ತುಂಬಿತ್ತು.  
ಗೋಷ್ಠಿಯಲ್ಲಿ ಪಾಲ್ಗೊಂಡವರು: ರಾಮಕೃಷ್ಣ (ಡಾಮಿ), ಕಿರಣ್ (ಚಿಕ್ಕಣ್ಣ), ಪ್ರತಾಪ ಮತ್ತು ರವರು ಗೋಷ್ಠಿಯನ್ನು ನಡೆಸಿದರು. ಇತರ ಗೆಳೆಯರು ವರದಿಗಾರರಾದರು.

ಸ್ವಾಗತ:
ಸಂಘಟನೆಯ ರಾಮಕೃಷ್ಣರವರು ಎಲ್ಲರಿಗೂ ಸ್ವಾಗತ ಮಾಡಿ ಗೋಷ್ಠಿಯಲ್ಲಿದ್ದವರನ್ನು ಪರಿಚಯ ಮಾಡಿಕೊಟ್ಟರು.ಪ್ರಸ್ತಾವನೆ: ಗೋಷ್ಠಿಯ ಬಗ್ಗೆ ಪ್ರಸ್ತಾವನೆಯನ್ನು ಕಿರಣ್ (ಚಿಕ್ಕಣ್ಣ)ರವರು ಮಾಡಿಕೊಟ್ಟರು.ಒತ್ತಾಯಗಳು: ಪ್ರತಾಪ ರವರು ಸಂಘಟನೆಯ ಒತ್ತಾಯಗಳ ಬಗ್ಗೆ ವಿವರಿಸಿದರು.

ಶುರುವಾಯ್ತು ಪ್ರಶ್ನೆಗಳ ಸುರಿಮಳೆ... 
ಬಂದಿದ್ದ ಪತ್ರಿಕಾ ಗೆಳತಿಯರು 'ನ್ಯಾಯಾಲಯವೇ ಭ್ರಷ್ಟಾಚಾರದಲ್ಲಿ ತುಂಬಿದೆ. ವೈ.ಸಂಪಂಗಿಯಂತಹ ಶಾಸಕರು ನೇರವಾಗಿ ಸಿಕ್ಕಿಬಿದ್ದರೂ ಯಾವುದೇ ಶಿಕ್ಷೆಯಾಗದೇ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ನೀವು ಭ್ರಷ್ಟಾಚಾರವನ್ನು ಹೇಗೆ ನಿಲ್ಲಿಸುತ್ತೀರಾ?. ಸರ್ಕಾರಗಳು ಪೊಲೀಸ್ ಇಲಾಖೆಯೇ ಅತ್ಯಂತ ಭ್ರಷ್ಟವಾಗಿವೆ. ನೀವು ಏನು ಮಾಡಲು ಸಾಧ್ಯ? ಪ್ರಶ್ನೆಗಳ ಧಾಳಿಯನ್ನಾರಂಭಿಸಿದರು.

ಅಣುಕು ಪತ್ರಿಕಾಗೋಷ್ಠಿ ಆಗಿರುವುದರಿಂದ ನಮ್ಮ ಪತ್ರಿಕಾಗೋಷ್ಠಿಯ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು ಎಂದುಕೊಂಡಿದ್ದ ನಮಗೆಲ್ಲಾ ಗಾಬರಿಯಾಯಿತು.ಕೂಡಲೇ ಗೋಷ್ಠಿಯಲ್ಲಿ ಹಾಜರಿದ್ದ ನಮ್ಮ ಸಂಘಟಕರು ಉತ್ತರ ನೀಡಿದರು. ಹೌದು ಈ ವ್ಯವಸ್ಥೆ ಭ್ರಷ್ಟವಾಗಿದೆ. ಹಾಗೆಂದು ನಾವು ಮೌನವಹಿಸಿ ಸಹಿಸಿಕೊಂಡು ಹೋಗಲು ಸಾಧ್ಯವಿಲ್ಲ. ಜನರನ್ನು ಜಾಗೃತರನ್ನಾಗಿ ಮಾಡುತ್ತೇವೆ. ಆ ಮೂಲಕ ಬದಲಾವಣೆಯನ್ನು ತರುತ್ತೇವೆ ಎಂದು ವಿವರಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಆ ಅನುಭವಿ ವರದಿಗಾರರು 'ಸಾಧ್ಯವೇ ಇಲ್ಲಾ.. ನೀವು ಯಾವುದೇ ಕೆಲಸಗಳನ್ನು ಮಾಡಿಸಿಕೊಳ್ಳಲೂ ಲಂಚವನ್ನು ನೀಡಲೇ ಬೇಕಾಗುತ್ತದೆ. ಇಷ್ಟು ಹಾಳಾಗಿರುವ ವ್ಯವಸ್ಥೆಯನ್ನು ನೀವು ಸರಿಮಾಡಲು ಸಾಧ್ಯವೇ ಇಲ್ಲಾ.. ಲೋಕಾಯುಕ್ತರಿಗೇ ಬಾಗದ ಜನ ನಿಮ್ಮಿಂದ ಬದಲಾಗುತ್ತಾರೆಯೇ? '
ಎಂದು ಪ್ರಶ್ನಿಸಿದರು. 
 'ಖಂಡಿತವಾಗಿಯೂ.. ನೀವು ಹೇಳುತ್ತಿರುವುದು ನಿಜ. ಆದರೆ.. ಓದಲು ಬರೆಯಲು ಬಾರದೇ ಡ್ರಗ್ಸ್ ಕುಡಿತ ಇತ್ಯಾಧಿ ಕೆಟ್ಟ ಚಟಗಳಿಗೆ ದಾಸರಾಗಿದ್ದ ನಮ್ಮ 30 ಜನ ಯುವಕರನ್ನು ನಾವು ಜಾಗೃತರಾಗಿಸಿದ್ದೇವೆ ಇದು ಸಾಧ್ಯವಾಗಿದೆ. ನಾವೆಲ್ಲರೂ ನಿಮ್ಮ ಮುಂದಿದ್ದೇವೆ ಹಾಗೆಯೇ ಮುಂದೊಂದು ದಿನ ಈ ಸಂಖ್ಯೆ ಹೆಚ್ಚಿ ಸಮಾಜಿಕ ಬದಲಾವಣೆಗೆ ಕಾರಣವಾಗುವ ಬಗ್ಗೆ ನಾವು ವಿಶ್ವಾಸ ಇಟ್ಟಿದ್ದೇವೆ. 'ಎಂಬ ಮಾತುಗಳು ಅವರನ್ನು ಚಕಿತರನ್ನಾಗಿ ಮಾಡಿದವು.ಅವರು ನಮಗೆ ಶುಭಕೋರಿ ಹೊರಟರು.


ಪ್ರಜಾವಾಣಿಯ ಸತ್ಯನಾರಾಯಣ ರಾವ್ ಸರ್ ನಮಗೆಲ್ಲಾ ಊಟದ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಪ್ರೆಸ್ಕ್ಲಬ್ನಲ್ಲಿ ಊಟ ನಮ್ಮನ್ನು ಘಮ್ಮೆಂದು ಕಾಡುತ್ತಿತ್ತು. ಆದರೆ ನಾವು ವರದಿಯನ್ನು ಪೂರೈಸಿಯೇ ನಂತರ ಊಟ ಮಾಡಬೇಕಾದ ನಿಬಂಧನೆಯನ್ನು ಸ್ವಯಂಗೊಳಿಸಿದ್ದೆವು. ಹಾಗಾಗಿ ಬಾಯಿ ನೀರನ್ನು ನುಂಗುತ್ತಾ ವರದಿ ಮಾಡಿದೆವು.


ಪ್ರಜಾವಾಣಿಗೆ ಲಗ್ಗೆ
ಸುಮಾರು 3 ಗಂಟೆಯ ಸಮಯಕ್ಕೆ ಸರಿಯಾಗಿ ನಾವು ಪ್ರಜಾವಾಣಿಗೆ ಲಗ್ಗೆ ಹಾಕಿದೆವು. ಸಂಪಾದಕರು ಹಾಗೂ ಮುಖ್ಯ ವರದಿಗಾರರ ಅನುಪಸ್ಥಿತಿಯಲ್ಲಿ ನಮಗೆ ನಾರಾಯಣ್ ರಾವ್ ಮೆಟ್ರೋ ವಿಭಾಗದ ಮುಖ್ಯಸ್ಥರು ಪ್ರಜಾವಾಣಿ ಕಛೇರಿಯ ಹಂತ ಹಂತಗಳನ್ನು ವಿವರಿಸಿದರು.
 
ಪುಟ ವಿನ್ಯಾಸ 
ಚಿತ್ರ ಸಂಪಾದನೆ ಹಾಗೂ 
ಶೇಖರಣೆಸುದ್ದಿಯ ತಯಾರಿಕಾ ಹಂತಗಳು ಇನ್ನಿತರೆ ವಿಚಾರಗಳನ್ನು ತಿಳಿಸಿಕೊಟ್ಟರು.
 

 

ನಂತರ ಕ್ಯಾಂಟಿನ್ನಲ್ಲಿ ನಮಗಾಗಿ ಬಿಸಿಬಾದಾಮಿ ಹಾಲು ಬಿಸ್ಕೆಟ್ ತಯಾರಿಗಿದ್ದವು. ನಾವೆಲ್ಲ ಸವಿದು ಎಲ್ಲಾ ಪ್ರಜಾವಾಣಿ ಬಳಗಕ್ಕೂ ಧನ್ಯವಾದಗಳನ್ನು ಹೇಳಿ ಹೊರಟೆವು. 




ನಾವು ಹೊರ ಬರುತ್ತಿದ್ದಂತೆ ಸಂಜೆವಾಣಿ ಪತ್ರಿಕೆಯಲ್ಲಿ ನಮ್ಮ  ಪತ್ರಿಕಾಗೋಷ್ಠಿ ಬಗ್ಗೆ ಆಕರ್ಷಕವಾಗಿ ಸುದ್ದಿ ಪ್ರಕಟವಾಗಿತ್ತು. ಇದು ನಮ್ಮಲ್ಲಿ ಹೊಸ ಕನಸನ್ನು ಚಿಗುರೋಡೆಸಿತು. ನಮ್ಮದೇ ಆದ ಮಾಧ್ಯಮದ ಕನಸುಗಳು ಚಿಗುರೊಡೆಯುತ್ತಿವೆ..

Monday, February 22, 2010

ಪತ್ರಿಕೋದ್ಯಮ ತರಬೇತಿ


ಪತ್ರಿಕೋದ್ಯಮ ತರಬೇತಿ

ನಾವು ಹಲವಾರು ತಿಂಗಳುಗಳ ಕಾಲ ಕಷ್ಟಪಟ್ಟು ಪ್ರತಿ ತಿಂಗಳು ರೂಪಾಯಿಗಳನ್ನು ಕೂಡಿಹಾಕಿ ಅತ್ಯಂತ ಕಷ್ಟದಿಂದ ಬೆವರಸಿರಿ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಅದು ತಕ್ಕ ಮಟ್ಟಿಗೆ ಯಶಸ್ವಿಯೂ ಆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ನಮ್ಮ ಪ್ರಯತ್ನಕ್ಕೆ ಶ್ಲಾಘನೆಯನ್ನು ನೀಡಿದರು. ನಮ್ಮ ಎಲ್ಲಾ ಕಾರ್ಯಕರ್ತರೂ ತುಂಬಾ ಹೆಮ್ಮೆಪಟ್ಟುಕೊಂಡರು. ಹಲವಾರು ತಿಂಗಳುಗಳಿಂದ ಮಾಡಿದ್ದ ಶ್ರಮ ನಮಗೆ ತೃಪ್ತಿಯನ್ನು ನೀಡಿತು.

ಆದರೆ ನಮ್ಮ ಎದೆಗಳಲ್ಲೊಂದು ನೋವಿನ ಬೆಂಕಿಯ ಕಿಡಿ ಹೊತ್ತಿಕೊಂಡಿತ್ತು. ಕಾರ್ಯಕ್ರಮದ ಮಾರನೇ ದಿನ ಸಂಜೆ ನಾವೆಲ್ಲರೂ ಕಾರ್ಯಕ್ರಮದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಭೆ ಸೇರಿದ್ದೆವು. ಕಾರ್ಯಕ್ರಮಕ್ಕೆ ಹಲವಾರು ಮಾಧ್ಯಮದವರು ಪಾಲ್ಗೊಂಡು ನಮ್ಮ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ವರದಿಗಳನ್ನು ಸಿದ್ದಪಡಿಸಿಕೊಂಡಿದ್ದರು. ತಡವಾಗಿ ಬಂದ ಕೆಲ ಮಾಧ್ಯಮದವರಂತೂ ಸನ್ಮಾನಿತರನ್ನು ಮತ್ತೆ ಮತ್ತೆ ಕೂರಿಸಿ ತಮಗೆ ಬೇಕಾದಂತೆ ವಿವಿಧ ಭಂಗಿಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿದರು. ಮತ್ತೆ ಕೆಲವರು ಕಾರ್ಯಕ್ರಮ ಆರಂಭವಾಗುವುದಕ್ಕೆ ಮುನ್ನವೇ ಬಂದು ಕಾದು ಕುಳಿತ್ತಿದ್ದರು.

ಮಾರನೇ ದಿನ ಯಾವುದೇ ಚಾನೆಲ್ಗಳಲ್ಲಾಗಲೀ ಪತ್ರಿಕೆಗಳಲ್ಲಾಗಲೀ ನಮ್ಮ ಕಾರ್ಯಕ್ರಮದ ಫೋಟೋ ವರದಿ ಇರಲಿ ಒಂದು ಅಕ್ಷರವೂ ಸಹ ಬರಲಿಲ್ಲ. ಪ್ರಚಾರಕ್ಕಾಗಿ ಈ ಕಾರ್ಯಕ್ರಮವನ್ನು ಮಾಡಿರಲಿಲ್ಲ, ಆದರೆ ಅಷ್ಟೂ ಮಾಧ್ಯಮದವರು ಬೇಕು ಬೇಕಾದಂಗೆಲ್ಲಾ ಕಿರಿ ಕಿರಿ ಮಾಡಿ ಫೋಟೋ ಕ್ಲಿಕ್ಕಿಸಿ ಮಾಹಿತಿ ಪಡೆದುಕೊಂಡು ಹೋಗಿದ್ದು ಹಾಗೂ ಕೆಲ ಮಾಧ್ಯಮದವರು ಮುಖಪುಟದಲ್ಲೇ ಕಾರ್ಯಕ್ರಮ ವರದಿ ಬರುವುದೆಂದು ಹೇಳಿದ್ದು ನಮಗೆ ಆಸೆ ಹುಟ್ಟಿಸಿತ್ತು.


ಹಲವಾರು ಜನಪರ ಪ್ರತಿಭಟನೆ ಹೋರಾಟಗಳನ್ನು ಸಂಘಟಿಸಿದ್ದ ಸಂಘಟಕರಿಗೆ ಈ ರೀತಿಯ ಮಾಧ್ಯಮದವರ ನಡುವಳಿಕೆ ಸಾಮಾನ್ಯವೇ ಎನ್ನಿಸಿತ್ತು ವಿಶೇಷವೇನೂ ಇರಲಿಲ್ಲ. ಆದರೆ ತಮ್ಮದೇ ಜಂಜಾಟದ ಬದುಕಿನ ನಡುವೆ ಒದ್ದಾಡುತ್ತಾ ಎಲ್ಲಾ ನೋವುಗಳನ್ನು ನುಂಗಿಕೊಂಡು ಫಳಕ್.. ಫಳಕ್.. ಎಂದು ಮುಖಕ್ಕೆ ಬಡಿದ ಮಾಧ್ಯಮದವರ ಕ್ಯಾಮರಾ ಬೆಳಕು ಸಾಮಾನ್ಯ ಕಾರ್ಯಕರ್ತರ ಕನಸುಗಳ ಮೇಲೆ ಬರೆ ಹಾಕಿತ್ತು.


ಅಲ್ಲಾ ಅಣ್ಣಾ.. ಅಷ್ಟು ಜನ ಬಂದು ಹಂಗ್ ನಿಂತ್ಕೊಳ್ಳಿ ಹಿಂಗೆ ನಿಂತ್ಕೊಳ್ಳಿ.. ನಾಳೆ ಪೇಪರ್ ನೋಡಿ ನಿಮ್ಮ ನ್ಯೂಸ್ ಫೋಟೋ ಬಂದಿರುತ್ತೆ ಅಂತೆಲ್ಲಾ ಹೇಳಿ.. ಒಂದು ಲೈನೂ ಬರ್ದಿಲ್ಲ.. ಯಾಕೆ?

ನಾವು ತಪ್ಪು ಮಾಡ್ಲಿಲ್ಲಾಂದ್ರೂ ಕಳ್ಳ್ರು ಅಂತ ಪೊಲೀಸೋರು ಎಳ್ಕೊಂಡೋಗಿ ನಾವು ಬೇಡ ಅಂದ್ರೂ ಸ್ಲೇಟ್ ಹಿಡ್ಸಿ ಫೋಟೋನ ದೊಡ್ಡ ದೊಡ್ಡದಾಗಿ ಹಾಕ್ತಾರೆ.. ಆದ್ರೆ ನಾವು ಕುಡಿಯೋದು ಎಲ್ಲಾ ಬಿಟ್ಟೂ ಒಳ್ಳೇ ಕೆಲಸ ಮಾಡಿದ್ರೆ ಯಾಕೆ ಹಾಕಲ್ಲಾ?..

ಅವರುಗಳ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿರಲಿಲ್ಲ. ಈ ಸಮಾಜ ಬಡವರು ತಪ್ಪು ಮಾಡಿದಾಗ ಕಳ್ಳರಂತೆ ಚಿತ್ರಿಸುವುದಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಅವರ ತ್ಯಾಗ ಸಾಧನೆಗಳಿಗೆ ಯಾಕೆ ಕೊಡುವುದಿಲ್ಲ!. ಶ್ರೀಮಂತರ ನಾಯಿ ಕಳೆದು ಹೋದರೆ ಡಾಗ್ ಷೋಗೆ ನೀಡುವ ಮುತುರ್ವಜಿ ನೂರಾರು ಬಡ ಕಾಮರ್ಿಕರು ಕಟ್ಟಡ ಕಟ್ಟುವಾಗ ಚರಂಡಿ ಸ್ವಚ್ಛಗೊಳಿಸುವಾಗ ಪ್ರಾಣಬಿಟ್ಟರೂ ಕೊಡುವುದಿಲ್ಲ ಯಾಕೆ?.

 
ಓಹೋ ಪತ್ರಿಕೆಗಳನ್ನು ನಡೆಸುವವರು ಓದುವವರು ಕೇವಲ ಶ್ರೀಮಂತ ವರ್ಗದವರೇ ಆಗಿದ್ದಾರೆ. ಹಾಗಾಗಿ ಪತ್ರಿಕೆಗಳು ಅವರ ಪರವಾಗಿಯೇ ಇವೆ ಅಲ್ಲವೇ!. ಬೆವರು ರಕ್ತ ಸುರಿಸಿ ಮರಗಳನ್ನು ಬೆಳಸಿ ಕೂಯ್ದು ಕಾಗದ ತಯಾರಿಸಿ ಯಂತ್ರಗಳನ್ನು ತಯಾರಿಸಿ ಮಸಿಯನ್ನು ತಯಾರಿಸುವ ಹಾಗೂ ಇವರ ಕಛೇರಿಗಳನ್ನು ಸ್ವಚ್ಛಗೊಳಿಸುವ ಬಡವರಿಗೆ ಯಾವ ಅಧಿಕಾರವಿದೆ ಅಲ್ಲವೇ?.

 
 ಈ ಪ್ರಶ್ನೆಗಳು ಹಲವು ತಿಂಗಳುಗಳ ಕಾಲ ನಮ್ಮ ಹೃದಯಗಳನ್ನು ಮೆದುಳುಗಳನ್ನು ಹಿಂಡಿ ಹಿಂಡಿ ಕಾಡಿದವು. ಕೊನೆಗೆ ಎಲ್ಲಾ ಮಾಧ್ಯಮಗಳ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳೋಣ ಎಂಬ ಸಲಹೆಗಳೂ ಬಂದವು. ಆದರೆ ಪ್ರಚಾರ ಬಯಸದ ನಮಗೆ ಅದು ಸೂಕ್ತವಾಗಿರಲಿಲ್ಲ. ಅಲ್ಲದೇ ನಮಗೆ ಯಾರ ದಾಕ್ಷಿಣ್ಯವೂ ಬೇಡವಾಗಿತ್ತು. ಕಾರ್ಯ ಮುಖೇನ ಉತ್ತರವನ್ನು ನೀಡುವ ಛಲವನ್ನು ಹುಟ್ಟು ಹಾಕಿತು.


Thursday, January 14, 2010

ಜನಪರ ಕಾರ್ಯಗಳು

ಕಿಲೋಸ್ಕ ಫೌಂಡ್ರಿಯ ಸ್ೞ ಚ್ಚತೆ
ಇದು ರಾಷ್ಟ್ರೀಯ ಹೆದ್ದಾರಿ ೪ರಲ್ಲಿರುವ , ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಸ್ಕಾನ್ ದೇವಾಲಯದ ಮುಂಭಾಗದಲ್ಲಿರುವ ಸಣ್ಣ ಕೊಳಗೇರಿ. ಇದು ಜನಾಸ್ತ್ರ ಸಂಘಟನೆಯ ಜನ್ಮಭೂಮಿ. ಸಂಘಟನೆಯ ಹೆಚ್ಚಿನ ಸದಸ್ಯರು ವಾಸಸ್ಥಳ. ಇಲ್ಲಿ ಜನಾಸ್ತ್ರ ಸಂಘಟನೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಇಲ್ಲಿರುವ
ಕುಡಿಯುವ ನೀರಿನ ಟ್ಯಾಂಕ್ ಆಡಳಿತ ಜನರ ನಿರ್ಲಕ್ಷ್ಯದಿಂದ ಅದರೊಳಗೆ ಸಾರಾಯಿ ಪಾಕೇಟ್ ಕಡ್ಡಿ ಕಸ ಇತ್ಯಾಧಿ ಬಿದ್ದು ನಾರುತ್ತಾ ರೋಗದ ಮನೆಯಾಗಿತ್ತು. ನೀರಿನ ನಲ್ಲಿಗಳು ಮುರಿದು ಹೋಗಿದ್ದವು. ಹೊರಚೆಲ್ಲುವ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಗೆ ಹರಿದು ರಸ್ತೆ ಪೂರ ಕೊಚ್ಚೆಯಾಗಿತ್ತು. ಟ್ಯಾಂಕ್ನ ಸುತ್ತ ಮುತ್ತ ನೀರು ನಿಂತು ಸೊಳ್ಳೆ ಹಾವಳಿಯಿತ್ತು. ಇದನ್ನು ಮನಗಂಡ ಸಂಘಟನೆಯ ಸದಸ್ಯರು ಪ್ರತಿ ಮನೆಯಿಂದ 1 ರೂ ಸಂಗ್ರಹಿಸಿ ಕುಡಿಯುವ ನೀರಿನ ಟ್ಯಾಂಕನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛ ಮಾಡಲಾಗುತ್ತದೆ.














ಸಾಲು: ಹಲವಾರು ಗೆಳೆಯರ ಸಹಕಾರದೊಂದಿಗೆ ಸಾಲು ಸಾಲು ಮರಗಳನ್ನು ನೆಡಲಾಗುತ್ತಿದೆ. ಕೆಲವು ತಿಂಗಳ ಹಿಂದೆ ರಸ್ತೆ ದುರಸ್ತಿಯ ಸಂದರ್ಭದಲ್ಲಿ ಗಿಡಗಳು ನಾಶವಾದವು. ಮತ್ತೆ ಹೊಸ ಸಸಿಗಳನ್ನು ನೆಡಲಾಗಿದ್ದು, ಅವುಗಳಿಗೆ ಸರಿಯಾದ ಪೋಷಣೆಯನ್ನು ನೀಡಲು ಕಾರ್ಯಪ್ರವೃತ್ತರಾಗಿದ್ದೇವೆ.








ಸ್ತೆ ಸ್ವಚ್ಚತೆ : ರಸ್ತೆಯ ಬದಿಯಲ್ಲಿ ಬೆಳೆದ ಗಿಡ ಗಂಟೆಗಳನ್ನು ಕಿತ್ತು ಮುಳ್ಳು ಗಿಡಗಳನ್ನು ಸುಟ್ಟು ನೈರ್ಮಲ್ಯ ಕಾಪಾಡಲು ಮಕ್ಕಳು ಯುವಕರು ದುಡಿಯುತ್ತಿದ್ದಾರೆ.











'ಮನೆ ಮನೆಗಳನ್ನು ಸ್ವಚ್ಛಗೊಳಿಸೋಣ ನಾಡನ್ನು ಹಸಿರು ಮಾಡೋಣ'