ನಾವು ಹಲವಾರು ತಿಂಗಳುಗಳ ಕಾಲ ಕಷ್ಟಪಟ್ಟು ಪ್ರತಿ ತಿಂಗಳು ರೂಪಾಯಿಗಳನ್ನು ಕೂಡಿಹಾಕಿ ಅತ್ಯಂತ ಕಷ್ಟದಿಂದ ಬೆವರಸಿರಿ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಅದು ತಕ್ಕ ಮಟ್ಟಿಗೆ ಯಶಸ್ವಿಯೂ ಆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ನಮ್ಮ ಪ್ರಯತ್ನಕ್ಕೆ ಶ್ಲಾಘನೆಯನ್ನು ನೀಡಿದರು. ನಮ್ಮ ಎಲ್ಲಾ ಕಾರ್ಯಕರ್ತರೂ ತುಂಬಾ ಹೆಮ್ಮೆಪಟ್ಟುಕೊಂಡರು. ಹಲವಾರು ತಿಂಗಳುಗಳಿಂದ ಮಾಡಿದ್ದ ಶ್ರಮ ನಮಗೆ ತೃಪ್ತಿಯನ್ನು ನೀಡಿತು.
ಆದರೆ ನಮ್ಮ ಎದೆಗಳಲ್ಲೊಂದು ನೋವಿನ ಬೆಂಕಿಯ ಕಿಡಿ ಹೊತ್ತಿಕೊಂಡಿತ್ತು. ಕಾರ್ಯಕ್ರಮದ ಮಾರನೇ ದಿನ ಸಂಜೆ ನಾವೆಲ್ಲರೂ ಕಾರ್ಯಕ್ರಮದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಭೆ ಸೇರಿದ್ದೆವು. ಕಾರ್ಯಕ್ರಮಕ್ಕೆ ಹಲವಾರು ಮಾಧ್ಯಮದವರು ಪಾಲ್ಗೊಂಡು ನಮ್ಮ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ವರದಿಗಳನ್ನು ಸಿದ್ದಪಡಿಸಿಕೊಂಡಿದ್ದರು. ತಡವಾಗಿ ಬಂದ ಕೆಲ ಮಾಧ್ಯಮದವರಂತೂ ಸನ್ಮಾನಿತರನ್ನು ಮತ್ತೆ ಮತ್ತೆ ಕೂರಿಸಿ ತಮಗೆ ಬೇಕಾದಂತೆ ವಿವಿಧ ಭಂಗಿಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿದರು. ಮತ್ತೆ ಕೆಲವರು ಕಾರ್ಯಕ್ರಮ ಆರಂಭವಾಗುವುದಕ್ಕೆ ಮುನ್ನವೇ ಬಂದು ಕಾದು ಕುಳಿತ್ತಿದ್ದರು.
ಮಾರನೇ ದಿನ ಯಾವುದೇ ಚಾನೆಲ್ಗಳಲ್ಲಾಗಲೀ ಪತ್ರಿಕೆಗಳಲ್ಲಾಗಲೀ ನಮ್ಮ ಕಾರ್ಯಕ್ರಮದ ಫೋಟೋ ವರದಿ ಇರಲಿ ಒಂದು ಅಕ್ಷರವೂ ಸಹ ಬರಲಿಲ್ಲ. ಪ್ರಚಾರಕ್ಕಾಗಿ ಈ ಕಾರ್ಯಕ್ರಮವನ್ನು ಮಾಡಿರಲಿಲ್ಲ, ಆದರೆ ಅಷ್ಟೂ ಮಾಧ್ಯಮದವರು ಬೇಕು ಬೇಕಾದಂಗೆಲ್ಲಾ ಕಿರಿ ಕಿರಿ ಮಾಡಿ ಫೋಟೋ ಕ್ಲಿಕ್ಕಿಸಿ ಮಾಹಿತಿ ಪಡೆದುಕೊಂಡು ಹೋಗಿದ್ದು ಹಾಗೂ ಕೆಲ ಮಾಧ್ಯಮದವರು ಮುಖಪುಟದಲ್ಲೇ ಕಾರ್ಯಕ್ರಮ ವರದಿ ಬರುವುದೆಂದು ಹೇಳಿದ್ದು ನಮಗೆ ಆಸೆ ಹುಟ್ಟಿಸಿತ್ತು.
ಹಲವಾರು ಜನಪರ ಪ್ರತಿಭಟನೆ ಹೋರಾಟಗಳನ್ನು ಸಂಘಟಿಸಿದ್ದ ಸಂಘಟಕರಿಗೆ ಈ ರೀತಿಯ ಮಾಧ್ಯಮದವರ ನಡುವಳಿಕೆ ಸಾಮಾನ್ಯವೇ ಎನ್ನಿಸಿತ್ತು ವಿಶೇಷವೇನೂ ಇರಲಿಲ್ಲ. ಆದರೆ ತಮ್ಮದೇ ಜಂಜಾಟದ ಬದುಕಿನ ನಡುವೆ ಒದ್ದಾಡುತ್ತಾ ಎಲ್ಲಾ ನೋವುಗಳನ್ನು ನುಂಗಿಕೊಂಡು ಫಳಕ್.. ಫಳಕ್.. ಎಂದು ಮುಖಕ್ಕೆ ಬಡಿದ ಮಾಧ್ಯಮದವರ ಕ್ಯಾಮರಾ ಬೆಳಕು ಸಾಮಾನ್ಯ ಕಾರ್ಯಕರ್ತರ ಕನಸುಗಳ ಮೇಲೆ ಬರೆ ಹಾಕಿತ್ತು.
ಅಲ್ಲಾ ಅಣ್ಣಾ.. ಅಷ್ಟು ಜನ ಬಂದು ಹಂಗ್ ನಿಂತ್ಕೊಳ್ಳಿ ಹಿಂಗೆ ನಿಂತ್ಕೊಳ್ಳಿ.. ನಾಳೆ ಪೇಪರ್ ನೋಡಿ ನಿಮ್ಮ ನ್ಯೂಸ್ ಫೋಟೋ ಬಂದಿರುತ್ತೆ ಅಂತೆಲ್ಲಾ ಹೇಳಿ.. ಒಂದು ಲೈನೂ ಬರ್ದಿಲ್ಲ.. ಯಾಕೆ?
ನಾವು ತಪ್ಪು ಮಾಡ್ಲಿಲ್ಲಾಂದ್ರೂ ಕಳ್ಳ್ರು ಅಂತ ಪೊಲೀಸೋರು ಎಳ್ಕೊಂಡೋಗಿ ನಾವು ಬೇಡ ಅಂದ್ರೂ ಸ್ಲೇಟ್ ಹಿಡ್ಸಿ ಫೋಟೋನ ದೊಡ್ಡ ದೊಡ್ಡದಾಗಿ ಹಾಕ್ತಾರೆ.. ಆದ್ರೆ ನಾವು ಕುಡಿಯೋದು ಎಲ್ಲಾ ಬಿಟ್ಟೂ ಒಳ್ಳೇ ಕೆಲಸ ಮಾಡಿದ್ರೆ ಯಾಕೆ ಹಾಕಲ್ಲಾ?..
ಅವರುಗಳ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿರಲಿಲ್ಲ. ಈ ಸಮಾಜ ಬಡವರು ತಪ್ಪು ಮಾಡಿದಾಗ ಕಳ್ಳರಂತೆ ಚಿತ್ರಿಸುವುದಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಅವರ ತ್ಯಾಗ ಸಾಧನೆಗಳಿಗೆ ಯಾಕೆ ಕೊಡುವುದಿಲ್ಲ!. ಶ್ರೀಮಂತರ ನಾಯಿ ಕಳೆದು ಹೋದರೆ ಡಾಗ್ ಷೋಗೆ ನೀಡುವ ಮುತುರ್ವಜಿ ನೂರಾರು ಬಡ ಕಾಮರ್ಿಕರು ಕಟ್ಟಡ ಕಟ್ಟುವಾಗ ಚರಂಡಿ ಸ್ವಚ್ಛಗೊಳಿಸುವಾಗ ಪ್ರಾಣಬಿಟ್ಟರೂ ಕೊಡುವುದಿಲ್ಲ ಯಾಕೆ?.
ಓಹೋ ಪತ್ರಿಕೆಗಳನ್ನು ನಡೆಸುವವರು ಓದುವವರು ಕೇವಲ ಶ್ರೀಮಂತ ವರ್ಗದವರೇ ಆಗಿದ್ದಾರೆ. ಹಾಗಾಗಿ ಪತ್ರಿಕೆಗಳು ಅವರ ಪರವಾಗಿಯೇ ಇವೆ ಅಲ್ಲವೇ!. ಬೆವರು ರಕ್ತ ಸುರಿಸಿ ಮರಗಳನ್ನು ಬೆಳಸಿ ಕೂಯ್ದು ಕಾಗದ ತಯಾರಿಸಿ ಯಂತ್ರಗಳನ್ನು ತಯಾರಿಸಿ ಮಸಿಯನ್ನು ತಯಾರಿಸುವ ಹಾಗೂ ಇವರ ಕಛೇರಿಗಳನ್ನು ಸ್ವಚ್ಛಗೊಳಿಸುವ ಬಡವರಿಗೆ ಯಾವ ಅಧಿಕಾರವಿದೆ ಅಲ್ಲವೇ?.
ಈ ಪ್ರಶ್ನೆಗಳು ಹಲವು ತಿಂಗಳುಗಳ ಕಾಲ ನಮ್ಮ ಹೃದಯಗಳನ್ನು ಮೆದುಳುಗಳನ್ನು ಹಿಂಡಿ ಹಿಂಡಿ ಕಾಡಿದವು. ಕೊನೆಗೆ ಎಲ್ಲಾ ಮಾಧ್ಯಮಗಳ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳೋಣ ಎಂಬ ಸಲಹೆಗಳೂ ಬಂದವು. ಆದರೆ ಪ್ರಚಾರ ಬಯಸದ ನಮಗೆ ಅದು ಸೂಕ್ತವಾಗಿರಲಿಲ್ಲ. ಅಲ್ಲದೇ ನಮಗೆ ಯಾರ ದಾಕ್ಷಿಣ್ಯವೂ ಬೇಡವಾಗಿತ್ತು. ಕಾರ್ಯ ಮುಖೇನ ಉತ್ತರವನ್ನು ನೀಡುವ ಛಲವನ್ನು ಹುಟ್ಟು ಹಾಕಿತು.
ನಾವೇ ವರದಿಗಾರರಾಗೋಣ ನಾವೇ ಪತ್ರಿಕೆ ನಡೆಸೋಣ ಎಂದು ತೀರ್ಮಾನಿಸಿ ಬಿಟ್ಟೆವು. ಆದರೆ ನಮಗೆ ಅರ್ಥಿಕ ಶಕ್ತಿ ಬೇಕಿತ್ತಲ್ಲಾ?. ಕೊನೆಗೆ ಚಿಂತಿಸಿ ಪತ್ರಿಕೆ ಹೊರ ತರಲು ಹಣವಿರದ ಕಾರಣ ನ್ಯೂಸ್ ಬ್ಲಾಗ್ ತಯಾರಿಸಲು ನಿರ್ಧರಿಸಿದೆವು. ಏಕೆಂದರೆ ನಾವು ಇಂಟರ್ನೆಟ್ ಬ್ರೌಸಿಂಗ್ ಸೆಂಟರ್ಗೆ ಹೋಗಿ ವರದಿಯನ್ನು ಟೈಪ್ ಮಾಡಿ ಉಚಿತವಾಗಿ ಸಿಗುವ ಬ್ಲಾಗ್ನಲ್ಲಿ ಪ್ರಕಟಿಸಲು ಬೇಕಾಗುವ 500 ರಿಂದ 1000ರೂಗಳನ್ನು ಭರಿಸುವ ಶಕ್ತಿ ನಮಗಿತ್ತು.
ಸಂಘಟನೆಯ ಎಲ್ಲರೂ 50ರೂ 100ರೂಗಳನ್ನು ಹಾಕಿಕೊಂಡು ಬ್ಲಾಗ್ ತಯಾರಿಸಲೇನೋ ತೀರ್ಮಾನಿಸಿದೆವು. ಸಂಘಟನೆಗೆ ಸೇರಿದ್ದ ಕೆಲವು ವಿಧ್ಯಾರ್ಥಿಗಳಿದ್ದರು. ಅವರು ಸುಲಭವಾಗಿ ಕಲಿಯ ಬಲ್ಲವರಾಗಿದ್ದರು. ಆದರೆ ಉಳಿದ ಹೆಚ್ಚಿನವರು ಸರಿಯಾಗಿ ಓದಲು ಬರೆಯಲು ಬಾರದವರು. ಭಾನುವಾರವೂ ಕೆಲಸಕ್ಕೆ ಹೋಗುವವರು ಏನು ಮಾಡುವುದು ಎಂಬ ಸಮಸ್ಯೆ ಎದುರಾಯಿತು.
ಕೊನೆಗೆ ಅವರಲ್ಲಿ ಆಸಕ್ತ ಕೆಲವರನ್ನು ಆಯ್ಕೆ ಮಾಡಿ ಓದು ಬರಹ ಹೇಳಕೊಡಲಾಯಿತು. ಬರವಣಿಗೆಯನ್ನು ಕಲಿಸಿಕೊಡಲಾಯಿತು. ಪ್ರತಿ ಭಾನುವಾರ ಸಂಜೆಯ ಸಮಯ 3 ಗಂಟೆ ಸಮಯ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಯಿತು. ದಿನಾಂಕ: 26-7-09, 2-8-09, 9-8-09 ಹೀಗೆ ಮೂರು ಭಾನುವಾರಗಳು ಸಂಘಟನೆಯ ಕಾರ್ಯಕರ್ತೆ ಸದಸ್ಯೆ ಹಾಗು ಡೆಕ್ಕನ್ ಹೆರಾಲ್ಡ್ ನಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದ ಪತ್ರಿಕೋದ್ಯಮ ವಿಭಾಗದ ವಿಧ್ಯಾರ್ಥಿನಿ ಪ್ರೇಮಕಲಾ (ಪ್ರಸ್ತುತ ಬಿಎಂಎಸ್ ಕಾಲೇಜಿನ ಉಪನ್ಯಾಸಕಿ) ಪತ್ರಿಕೋದ್ಯಮದ ಬಗ್ಗೆ ತರಗತಿಗಳನ್ನು ನಡೆಸಿದರು. The Movement of India ಪತ್ರಿಕೆಯಲ್ಲಿ ಸಂಪಾದಕ ಸದಸ್ಯ ಹಾಗೂ ಲಂಕೇಶ್ ಇನ್ನಿತರ ಪತ್ರಿಕೆಗಳಲ್ಲಿ ವರದಿಗಾರನಾಗಿ ಅನುಭವ ಹೊಂದಿರುವ ಆದಿತ್ಯರವರು ಮಾಧ್ಯಮದ ಒಟ್ಟಾರೆ ಚಿಂತನೆ ಮತ್ತು ಬರವಣಿಗೆಯ ಬಗ್ಗೆ ಉಪನ್ಯಾಸ ನೀಡಿದರು.
ದಿನಾಂಕ: 16-08-09ರಂದು ಸಂಘಟನೆಯ ಒಟ್ಟು 30 ಮಂದಿ ಯುವಕ ಯುವತಿಯರಿಗೆ ಒಂದು ದಿನದ ಪತ್ರಿಕಾ ವರದಿ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಯಿತು.
ಬೆಳಿಗ್ಗೆ 9.30ಕ್ಕೆಸ್ವಾಗತ: ಶಿಬಿರದ ಉದ್ಘಾಟನೆಯನ್ನು ಸಂಘಟನೆಯ ಚಿಕ್ಕಣ್ಣ (ಕಿರಣ್)ರವರು ಸ್ವಾಗತದ ಮೂಲಕ ಮಾಡಿದರು.
ಪ್ರಸ್ತಾವನೆ: ಆದಿತ್ಯರವರು ಮತ್ತೊಮ್ಮೆ ಸ್ವಾಗತಿಸಿ ಕಾರ್ಯಗಾರದ ಬಗ್ಗೆ ಪ್ರಸ್ತಾವನೆಯನ್ನು ಮಾಡಿ
ನಂತರ ದಯಾನಂದರವರನ್ನು ವೇದಿಕೆಗೆ ಸ್ವಾಗತಿಸಿದರು.

ಟಿ.ಕೆ.ದಯಾನಂದ್ ಟಿವಿ 9 ವರದಿಗಾರ ಹಾಗೂ ಪ್ರಾಧ್ಯಾಪಕ.
ಪತ್ರಿಕೆ ಮತ್ತು ಮಾಧ್ಯಮಗಳ ಬಗ್ಗೆ ಹಾಗೂ ವರದಿಯ ಅಂಗಗಳ ಬಗ್ಗೆ ತಿಳಿಸಿದರು. ವರದಿಗಾರನಿಂದ ಓದುಗನಿಗೆ ತಲುಪವ ನಡುವಿನ ಎಲ್ಲಾ ಹಂತಗಳನ್ನು ಹೇಳಿಕೊಡಲಾಯಿತು. ಪತ್ರಿಕೆಯ ಮುದ್ರಣದ ತಾಂತ್ರಿಕ ವ್ಯವಸ್ಥೆಯನ್ನು ಪರಿಚಯಿಸಿಕೊಟ್ಟರು. ಸುದ್ದಿಯ ವಿಶ್ಲೇಷಣೆ, ಹೆಡ್ ಲೈನ್, ಇಂಟ್ರೋ, ಸಬ್ ಟೈಟಲ್, ಬಾಡಿ ಆಫ್ ಎಂಡ್ ಆಫ್ ದಿ ನ್ಯೂಸ್ನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ಶಿಬಿರದಲ್ಲಿ ಪಾಲ್ಗೊಂಡವರಿಗೆ ಸುದ್ದಿಯನ್ನು ಬರೆಯಲು ಹೇಳಿ ಟೀ ವಿರಾಮ ನೀಡಲಾಯಿತು. ನಂತರ ಶಿಬಿರಾರ್ಥಿಗಳ ವರದಿಗಳನ್ನು ಪರಿಶೀಲಿಸಿ ಸೂಕ್ತ ಸಲಹೆಗಳನ್ನು ನೀಡಿದರು. ಶಿಬಿರಾಥರ್ಿಗಳು ಪರಸ್ಪರ ವರದಿಗಳ ವಿಶ್ಲೇಷಣೆ ಮಾಡಿದರು.
ಮಾಧ್ಯಮದ ಅಗತ್ಯ:
ರಾಘವೇಂದ್ರ ಗೌಡ ಈಟಿವಿ ವರದಿಗಾರ
ರಾಘವೇಂದ್ರರವರು ಸಾಮಾನ್ಯ ಜನರಿಗೆ ಮಾಧ್ಯಮದಲ್ಲಿ ಪ್ರವೇಶ ಪಡೆಯಲು ಆಗುವ ಕಷ್ಟಗಳನ್ನು ವಿವರಿಸಿದರು. ಮಾಧ್ಯಮಗಳಲ್ಲಿ ನಡೆಯುವ ರಾಜಕೀಯಗಳನ್ನು ತಮ್ಮ ಅನುಭವಗಳ ಮೂಲಕ ವಿವರಿಸಿದರು. ಮಾಧ್ಯಮದಲ್ಲಿನ ವರ್ಗ ಆಧಾರಿತ ವ್ಯವಸ್ಥೆಯನ್ನು ಗುರುತಿಸಿ ಕೊಟ್ಟರು.
ರಾಘವೇಂದ್ರರವರು ಸಾಮಾನ್ಯ ಜನರಿಗೆ ಮಾಧ್ಯಮದಲ್ಲಿ ಪ್ರವೇಶ ಪಡೆಯಲು ಆಗುವ ಕಷ್ಟಗಳನ್ನು ವಿವರಿಸಿದರು. ಮಾಧ್ಯಮಗಳಲ್ಲಿ ನಡೆಯುವ ರಾಜಕೀಯಗಳನ್ನು ತಮ್ಮ ಅನುಭವಗಳ ಮೂಲಕ ವಿವರಿಸಿದರು. ಮಾಧ್ಯಮದಲ್ಲಿನ ವರ್ಗ ಆಧಾರಿತ ವ್ಯವಸ್ಥೆಯನ್ನು ಗುರುತಿಸಿ ಕೊಟ್ಟರು.
ನಂತರ ಸಂಘಟನೆಯ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
3. ಛಾಯಾಗ್ರಹಣ ಮತ್ತು ಸುದ್ದಿ ನೋಟ: ಶಾಂತರಾಜ್ ಪ್ರಾಧ್ಯಾಪಕರು
ಶಾಂತರಾಜ್ರವರು ತೆಹಲ್ಕಾದಲ್ಲಿ ಬಿಂಬಿತವಾದ ನಕಲಿ ಎನ್ಕೌಂಟರ್ ಬಯಲು ಮಾಡಿದ ಛಾಯಾಚಿತ್ರಗಳನ್ನು ತೋರಿಸಿದರು. ಮುಚ್ಚಿಡಬಹುದಾದ ಸತ್ಯಗಳನ್ನು ಹೇಗೆ ಫೋಟೋ ಪ್ರಕಟಗೊಳಿಸುತ್ತದೆ. ಛಾಯಾಚಿತ್ರಗಳು ಅಕ್ಷರಗಳಿಗಿಂತ ಹೇಗೆ ಭಿನ್ನ ಹಾಗೂ ಪ್ರಖರವಾಗಿದೆ ಎಂದು ತಿಳಿಸಿದರು. ಫೋಟೋ ಕ್ಲಿಕ್ಕಿಸುವಾಗ ಗಮನಿಸಬೇಕಾದ ಬೆಳಕು ಕೇಂದ್ರ ವಸ್ತುವಿನ ಸುತ್ತಲಿನ ಪರಿಸರ ಹಾಗೂ ನೋಡುವ ದೃಷ್ಟಿಕೋನ ಇತ್ಯಾಧಿ ತಾಂತ್ರಿಕ ವಿಚಾರಗಳನ್ನು ಹಾಗೂ ಕ್ಯಾಮರಾದ ಬಳಕೆಯನ್ನು ಹೇಳಿಕೊಟ್ಟರು.

ಟೀ ವಿರಾಮದ ನಂತರ ಗೀತಾ-ನೀತಾ ತಂಡದಿಂದ ಜಾನಪದ ಗೀತೆ ಎತ್ತಿನ ಕೊರಳ ಗೆಜ್ಜೆ.. ಹಾಡನ್ನು ಹಾಡಿ ಶಿಬಿರಾರ್ಥಿಗಳ ಉತ್ಸಾಹವನ್ನು ಹೆಚ್ಚಿಸಿದರು.
4. ವೈವಿಧ್ಯ ಸಮಾಜ ಮತ್ತು ಮಾಧ್ಯಮ: ದೇವರಾಜ್ ಸಂವಾದ

ಸಮಾಜವು ಅವಲಂಭಿತವಾಗಿರುವ ಅಂಶಗಳು ಸಮಾಜದ ವ್ಯವಸ್ಥೆ ಹಾಗೂ ಹಣದ ನಿಯಂತ್ರಣವನ್ನು ಅದರಿಂದಾಗುವ ಮಾಧ್ಯಮದ ಮೇಲಿನ ಪರಿಣಾಮಗಳನ್ನು ತಿಳಿಸಿಕೊಟ್ಟರು.

6. ಪ್ರಮಾಣ ಪತ್ರ ವಿತರಣೆ:
ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಶಿಬಿರಾರ್ಥಿಗಳಿಗೆ ಕರ್ನಾಟಕ ಜನಪರ ವೇದಿಕೆಯ ಸಹ ಕಾರ್ಯದರ್ಶಿ ಕುಮಾರ್ ಸಮತಳರವರು ಪ್ರಮಾಣಪತ್ರಗಳನ್ನು ವಿತರಿಸಿದರು. ಸಮಾಜದಲ್ಲಿನ ಜವಾಬ್ದಾರಿಯನ್ನು ಅರಿತು ಸಂಘಟಿತರಾಗಿ ಎಲ್ಲಾ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕೆಂದು ಕರೆನೀಡಿದರು.

ವಂದನಾರ್ಪಣೆ: ಸಂಘಟನೆಯ ಗೆಳೆಯ ಕುನ್ನಿ (ವಿಶ್ವನಾಥ್)ರವರು ಶಿಬಿರಕ್ಕೆ ಸ್ಥಳವಾಕಾಶ ಮಾಡಿಕೊಟ್ಟ ಬಿಎನ್ಇಎಸ್ ಕಾಲೇಜಿನ ಕಾರ್ಯದರ್ಶಿಗಳಾದ ಪ್ರೊ.ರಾಧಾಕೃಷ್ಣರಿಗೆ, ವಿಚಾರಗಳನ್ನು ಹಂಚಿಕೊಂಡ ಎಲ್ಲಾ ಹಿರಿಯರಿಗೂ, ನೆರವಾದ ಎಲ್ಲರಿಗೂ ಹಾಗೂ ಶಿಬಿರಾರ್ಥಿಗಳಿಗೆ ಸಂಘಟನೆಯ ಪರವಾಗಿ ವಂದನಾರ್ಪಣೆ ಸಲ್ಲಿಸಿದರು.
ಊಟದ ವ್ಯವಸ್ಥೆ: ರಾಮಕೃಷ್ಣ (ಡಾಮಿ) ಟೀ ವ್ಯವಸ್ಥೆ: ಗಂಗಣ್ಣ, ಸತ್ಯರಾಜ್.
ಪಾಲ್ಗೊಂಡ ಸದಸ್ಯರ ವಿವರ:
1. ಮಹೇಶ್. ಎನ್
2. ಉಷಾರಾಣಿ. ಪಿ
3. ಕಲ್ಪನಾ. ಎನ್
4. ತುಳಸಿದೇವಿ. ಎಂ
5. ಆಶಾಲತ. ಎನ್
6. ಎಂ. ರಾಮು
7. ಗೋಪಾಲ್ ಬಿ.ವಿ
8. ಪ್ರತಾಪ್. ಎಂ
9. ಕೆಸ್ತಾರ. ವಿ
10. ಹೇಮ
11. ಶೃತಿ
12. ಶಿಲ್ಪ. ಎಂ
13. ನರಸಿಂಹ ಮೂತರ್ಿ
14. ಶ್ರೀಧರ್
15. ವಿಶ್ವ (ಕುನ್ನಿ)
16. ಶ್ರೀನಿವಾಸ್ (ಸೀನಿ)
17. ಪುನೀತ್
18. ರಾಜೇಂದ್ರ ಪ್ರಸಾದ್
19. ಶಶಿಕಾಂತ್ ರಾವ್
20. ಗೀತಾ ಕೆ.ಜಿ
21. ನೀತಾ ಕೆ.ಜಿ
22. ಕಿರಣ್. ಎಲ್ (ಚಿಕ್ಕಣ್ಣ)
23. ಮುತ್ತು (ಮುತ್ತು ಕೃಷ್ಣನ್)
24. ಪ್ರೇಮಕಲಾ. ಹೆಚ್
25. ಕಾವ್ಯ ಬಿ.ಎಸ್
1. ಮಹೇಶ್. ಎನ್
2. ಉಷಾರಾಣಿ. ಪಿ
3. ಕಲ್ಪನಾ. ಎನ್
4. ತುಳಸಿದೇವಿ. ಎಂ
5. ಆಶಾಲತ. ಎನ್
6. ಎಂ. ರಾಮು
7. ಗೋಪಾಲ್ ಬಿ.ವಿ
8. ಪ್ರತಾಪ್. ಎಂ
9. ಕೆಸ್ತಾರ. ವಿ
10. ಹೇಮ
11. ಶೃತಿ
12. ಶಿಲ್ಪ. ಎಂ
13. ನರಸಿಂಹ ಮೂತರ್ಿ
14. ಶ್ರೀಧರ್
15. ವಿಶ್ವ (ಕುನ್ನಿ)
16. ಶ್ರೀನಿವಾಸ್ (ಸೀನಿ)
17. ಪುನೀತ್
18. ರಾಜೇಂದ್ರ ಪ್ರಸಾದ್
19. ಶಶಿಕಾಂತ್ ರಾವ್
20. ಗೀತಾ ಕೆ.ಜಿ
21. ನೀತಾ ಕೆ.ಜಿ
22. ಕಿರಣ್. ಎಲ್ (ಚಿಕ್ಕಣ್ಣ)
23. ಮುತ್ತು (ಮುತ್ತು ಕೃಷ್ಣನ್)
24. ಪ್ರೇಮಕಲಾ. ಹೆಚ್
25. ಕಾವ್ಯ ಬಿ.ಎಸ್
ಛಾಯಾಚಿತ್ರದ ಪ್ರಾಯೋಗಿಕ ಕಲಿಕೆಗಾಗಿ 5 ಜನರ 5 ತಂಡಗಳು
ತಂಡ 1.
ಎ. ಮಹೇಶ್. ಪಿ
ಬಿ. ಗೋಪಾಲ್ ಬಿ.ಎಂ
ಸಿ. ಕುನ್ನಿ (ವಿಶ್ವನಾಥ್)
ಡಿ. ಪ್ರತಾಪ್
ತಂಡ 2.
ಎ. ಮುತ್ತುಕೃಷ್ಣನ್
ಬಿ. ಕಿರಣ್
ಸಿ. ನರಸಿಂಹ ಮೂತರ್ಿ
ಡಿ. ಶ್ರೀಧರ್
ಈ. ಸೀನಿ (ಶ್ರೀನಿವಾಸ್)
ತಂಡ 3.
ಎ. ಶಶಿಕಾಂತ ರಾವ್
ಬಿ. ರಾಜೇಂದ್ರ ಪ್ರಸಾದ್
ಸಿ. ಪುನೀತ್
ತಂಡ 4.
ಎ.ಹೇಮ
ಬಿ.ನೀತಾ
ಸಿ.ಗೀತಾ
ಡಿ.ಶೃತಿ
ಇ.ಕೆಸ್ತಾರತಂಡ 5
ಎ. ತುಳಸಿದೇವಿ
ಬಿ. ಕಲ್ಪನಾ
ಸಿ. ಆಶಾಲತ. ಎನ್
ಡಿ. ಶಿಲ್ಪ. ಎಂ
ಇ. ಉಷಾರಾಣಿ. ಎಂ
ಈ ತಂಡಗಳು ತಂದ ಛಾಯಾಚಿತ್ರಗಳನ್ನು ಸರಿಮಾಡುವುದನ್ನು ಟಿ.ಕೆ.ದಯಾನಂದ್ ಹೇಳಿಕೊಟ್ಟರು.
No comments:
Post a Comment