ಜನಾಸ್ತ್ರ

ಜನಾಸ್ತ್ರ
ಜನರ ಹೋರಾಟದ ಅಸ್ತ್ರ

Thursday, July 2, 2009

ಬೆವರ ಸಿರಿ

(ಈ ಕಾರ್ಯ ಕ್ರಮದ ಬಗ್ಗೆಗಿನ 'ಉದಯವಾಣಿ' ಪತ್ರಿಕೆಯ ಮುನ್ನುಡಿಯನ್ನು ನೋಡಿ)
Please visit this page http://www.udayavani.com/showstory.asp?news=0&contentid=621546&lang=2



ಬೆವರ ಸಿರಿ

..ದುಡಿಯುವ ಜನರ ಬೆವರು ಸಿರಿಯಾಗಿ


ನಮ್ಮ ಶ್ರೀಮಂತ ಸಮಾಜದಲ್ಲಿ ನಿರ್ಲಕ್ಷ್ಯಗೊಳಗಾಗಿ ಸರ್ಕಾರಿ ಶಾಲೆಗಳಲ್ಲಿ 5-6ನೇ ತರಗತಿ ಓದಿ ಬಡತನ ಹಾಗೂ ಇತರ ಕಾರಣಗಳಿಗೆ ಶಾಲೆ ಬಿಟ್ಟು ಮನೆಯ ಬಡತನಕ್ಕೆಮೂಟೆ ಹೊರುವ,ಕಾರು ತೊಳೆಯುವ, ಗಾರೆ ಕೆಲಸ, ಪಾನಿಪುರಿ ಗಾಡಿಗಳಲ್ಲಿ ಪ್ಲೇಟ್ ತೊಳೆವ, ಗ್ಯಾರೆಜ, ಮನೆಕೆಲಸಗಳಲ್ಲಿ, ಬ್ಯೂಟಿಪಾರ್ಲರ್ಗಳಲ್ಲಿ ಕೂಲಿ ಕೆಲಸಗಳನ್ನು ಮಾಡುತ್ತಾ ಗೌರವದಿಂದ ಎದೆಯುಬ್ಬಿಸಿ ದುಡಿಯುತ್ತಿರುವ ಸ್ಲಮ್ ನ ಯುವಕ ಯುವತಿಯರು ಹಸಿವಿನೊಡನೆ ಹೋರಾಡುತ್ತಾ ಬಿಡುವು ಸಿಕ್ಕಾಗ ತಮ್ಮನ್ನು ನಿರ್ಲಕ್ಷ್ಯಿಸಿದ ಸಮಾಜದಲ್ಲಿ ಸರ್ವ ಸಮಾನತೆಯ ಕನಸಿಗಾಗಿ ಚೇತನಧಾರೆ ಮತ್ತು ಜನಾಸ್ತ್ರ ಸಂಘಟನೆಗಳನ್ನು ಹುಟ್ಟುಹಾಕಿ ಪ್ರಜ್ಞಾವಂತ ಸಮಾಜ ಹೆಮ್ಮೆಯಿಂದ ನೂದುವಂತೆ ಯಾವುದೇ ವರ್ಗಸೀಮಿತವಲ್ಲದ,ಲಾಭಾಪೇಕ್ಷೆಯಿಲ್ಲದ,ರಾಜಕೀಯ ದುರುದ್ದೇಶವಿಲ್ಲದ ಸ್ಲಂಜನರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರೂ ಸೇರಿದಂತೆ ಶೋಷಿತವರ್ಗಗಳ ಕ್ಷೇಮಾಭಿವೃದ್ದಿಗಾಗಿ ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ವಿಧ್ಯಾರ್ಥಿಗಳು, ಯುವಕರು, ಬುದ್ದಿಜೀವಿಗಳ ಜೊತೆಗೂಡಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಸ್ವಾರ್ಥ ಪುರುಷ ಪ್ರಧಾನ ಸಮಾಜದ ನಿರಂತರ ಶೋಷಿತ ಹೆಣ್ಣಿನ ಒಳಗುದಿಯನ್ನು ಹೊರತೆಗೆಯಲು "ರಾಜ್ಯ ಮಟ್ಟದ ಸ್ತ್ರೀ ಕುರಿತ ಬಂಡಾಯ ಕವನ ಸ್ಪರ್ಧೆ" ಹಾಗೂ "ರಾಜ್ಯ ಮಟ್ಟದ ರಂಗೋಲಿ ಸ್ಪರ್ಧೆಗಳನ್ನು"
ಏರ್ಪಡಿಸಿ ಖ್ಯಾತ ಸಾಹಿತಿಗಳಿಂದ ಆಯ್ಕೆ ಪ್ರಕ್ರಿಯೆ ಮುಗಿಸಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಬಡತನದ ಬೂದಿಯಲಿ ಮುಚ್ಚಿಹೋದ ಪ್ರತಿಭೆಗಳಿಗೆ ಸನ್ಮಾನ ಸಮಾರಂಭ ಬೆವರಸಿರಿಯನ್ನು
ದಿನಾಂಕ:1-3-೨೦೦೯ರಂದು ಭಾನುವಾರ ನಗರದ ಶಾಸಕರ ಭವನದಲ್ಲಿ ಆಯೋಜಿಸಲಾಯಿತು.


ಅಧ್ಯಕ್ಷತೆ: ಡಾ.ಬಂಜಗೆರೆ ಜಯಪ್ರಕಾಶ ಖ್ಯಾತ ಸಾಹಿತಿಗಳು ಇವರ ಗೈರು ಹಾಜರಿಯಲ್ಲಿ
ಎಲ್.ಎನ್.ಮುಕುಂದರಾಜ್ ಕವಿಗಳು ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳು: ಬಿ.ಟಿ.ಲಲಿತಾನಾಯಕ್ ಮಾಜಿ ಸಚಿವರು ಹಾಗೂ ಬರಹಗಾರರು
ಪ್ರತಿಭಾನಂದಕುಮಾರ್ ಸಾಹಿತಿಗಳು ಹಾಗೂ ಪತ್ರಕರ್ತರು


ಕಾರ್ಯಕ್ರಮ ವಿವರ:

ಉದ್ಭಾಟನೆ: ಚೇತನಧಾರೆ ಹಾಗೂ ಜನಾಸ್ತ್ರ ಸಂಘಟನೆ ಸದಸ್ಯರಾದ ಸತ್ಯರಾಜ್ ಹಾಗೂ ಅತಿಥಿಗಳು ಉದ್ಭಾಟನೆ ಮಾಡಿದರು. ಸಂಘಟನೆಯ ಗೋಪಾಲ್, ಮೀನಾಶ್ರೀ, ಪ್ರಸಾದ್, ರಾಜೇಶ್ವರಿ, ತೇಜಾಕರ್ಶಿಣಿ 'ಜೋಗದ ಸಿರಿ..'ಯ ಮೂಲಕ ಉದ್ಭಾಟನೆಗೆ ದನಿ ಸೇರಿಸಿದರು.

ಸಂಘಟನೆಯ ಸಂಚಾಲಕರಾದ ಆದಿತ್ಯರವರು ಪ್ರಾಸ್ತಾವಿಕ ಭಾಷಣವನ್ನು, ಸಂಘಟನೆಯ ಉದ್ದೇಶ ಹಾಗೂ ಬೆವರಸಿರಿ ಕಾರ್ಯಕ್ರಮದ ಅಗತ್ಯವನ್ನು ಹೇಳಿದರು.

ಸನ್ಮಾನ:

1. ಸುಮಾರು 300ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿರುವ ಬೆಂಗಳೂರಿನ ವಿನಾಯಕ ಸ್ಲಂನ ಸಾಂಪ್ರದಾಯಿಕ ಪ್ರಸೂತಿ ತಜ್ಞೆ ಮಾಣಿಕ್ಯಮ್ಮ ರವರನ್ನು ಸನ್ಮಾನಿಸಲಾಯಿತು.

2. ತುಮಕೂರಿನ ಬುಲ್ ಬುಲ್ ತಾರ ವಾದಕ ಉಸ್ತಾದ್ ಅಬ್ದುಲ್ ಕಲಾಂ ರವರನ್ನು ಸನ್ಮಾನಿಸಲಾಯಿತು.







ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ತಮ್ಮ ಹಿತನುಡಿಗಳನ್ನು ಹೇಳುತ್ತಾ 'ಸಂಘಟನೆಯ ಯುವಕರು ಹಾಗೂ ಅವರ ಸಾಧನೆಯ ಬಗ್ಗೆ ಹೆಮ್ಮೆಯನ್ನು ಸೂಚಿಸಿದರು. ಹಾಗೂ ಆದಿತ್ಯರವರ ಕಪ್ಪು ಹಕ್ಕಿಯ ಹಾಡು ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯಮಟ್ಟದ ಕವನ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತೆ ಪ್ರತಿಭಾನಂದಕುಮಾರ್ ಸಂಘಟನೆಯ ಸಾಧನೆಯನ್ನು ಪ್ರಶಂಸಿದರು. ಸಂಘಟನೆಯ ಮುಂದಿನ ಹೋರಾಟಗಳಲ್ಲಿ ತಾವೂ ಪಾಲ್ಗೊಂಡು ಅಗತ್ಯವಾದ ಎಲ್ಲಾ ಸಹಕಾರಗಳನ್ನು ನೀಡುವುದಾಗಿ ತಿಳಿಸಿದರು. ಸಂಘಟನೆಯ ಸದಸ್ಯರು ತಮ್ಮ ಬಗ್ಗೆಗಿನ ಕೀಳಿರಿಮೆಯನ್ನು ಬಿಡಬೇಕೆಂದು ಹೇಳಿದರು.

ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಅಧ್ಯಕ್ಷೀಯ ಭಾಷಣ ಮಾಡಿದ ಎಲ್.ಎನ್.ಮುಕುಂದರಾಜ 'ಸ್ಲಂ ಕುನ್ನಿಗಳೆಂದು ಪರಿಗಣಿಸುವವರಿಗೆ ಸರಿಯಾದ ಉತ್ತರವನ್ನು ತಮ್ಮ ಸಾಧನೆಯ ಮೂಲಕ ಉತ್ತರಿಸಿದ್ದಾರೆ. ಸಾಮಾನ್ಯ ಜನರ ಜಯದ ದಿನಗಳು ಈ ಮೂಲಕ ಆರಂಭವಾಗಿದೆ ಖಂಡಿತ ಇದು ಮುಂದೊಂದು ದಿನದ ಶೋಷಿತ ಜನರ ಗೆಲ್ಲುವಿಗೆ ಮುನ್ನುಡಿ..' ಎಂದು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ನಂತರ ಪ್ರಶಸ್ತಿ ವಿಜೇತರು ಕವನವಾಚನವನ್ನು ಮಾಡಿದರು.

ಕೆಸ್ತಾರ ಹಾಗೂ ಸಂಗಡಿಗರು 'ಕಟ್ಟುತೇವ ನಾವು..' ಹಾಡನ್ನು ಹಾಡಿದರು.

ಬುಲ್ ಬುಲ್ ತಾರ ವಾದಕ ಉಸ್ತಾದ್ ಅಬ್ದುಲ್ ಕಲಾಂರವರು ತಮ್ಮ ವಾದನದಿಂದ ಎಲ್ಲರನ್ನೂ ರಂಜಿಸಿದರು.


ನಮ್ಮ ಸಂಘಟನೆ ಸತ್ಯರಾಜ 'ನಾವು ಹಲವಾರು ತಪ್ಪುಗಳನ್ನು ಮಾಡಿದ್ದೇವೆ ನಮ್ಮನ್ನು ಕ್ಷಮಿಸಿ ನಮ್ಮ ಮುಂದಿನ ಹೋರಾಟಗಳಿಗೆ ಜೊತೆಯಾಗಿ ಒಳ್ಳೇ ಸಮಾಜ ನಿರ್ಮಾಣ ಮಾಡೋಣ..' ಎಂದು ಕರೆ ನೀಡಿದರು. ಸಂಘಟನೆಯ ಸದಸ್ಯರಾದ ಶ್ರೀನಿವಾಸ್ ವಂದನಾರ್ಪಣೆ ಸಲ್ಲಿಸಿದರು.




ಪಾಲ್ಗೊಂಡಿದ ಹಿತೈಷಿಗಳು ಧನ ಸಹಾಯವನ್ನು ನೀಡಿ ಭರವಸೆ ಪ್ರಶಂಸೆಗಳನ್ನು ವ್ಯಕ್ತಪಡಿಸಿದರು. ರುಚಿಯಾದ ಬಿಸಿಬೇಳೆ ಬಾತ್ ತಂಪಾದ ಮೊ ಬಂದವರ ನಾಲಿಗೆ ಮೇಲೆ ನಲಿದಾಡಿತು.

ರಾಜ್ಯ ಮಟ್ಟದ ಸ್ತ್ರೀ ಕುರಿತ ಕವನ ಸ್ಪರ್ಧೆಯ ಫಲಿತಾಂಶ
ಸಂಖ್ಯೆ ಕವನ ವಿಜೇತರು ಶ್ರೇಣಿ
1. ಒಕ್ಕಣಿನ ರಾಕ್ಷಸರು - ಮಮತ ಅರಸಿಕೆರೆ - ಪ್ರಥಮ
2. ಮೌನಹಕ್ಕಿ - ಗೀತಾ ಬಿ ಸನದಿ - ದ್ವಿತೀಯ
3. ಅಹಲ್ಯೆಯ ಸ್ವಗತ - ದೀಪ್ತಿ ಹರ್ಷ ಎಸ್ ಡಬ್ಲ್ಯುಎಂಸಿ - ತೃತೀಯ


ಮೆಚ್ಚುಗೆ ಪಡೆದ ಹತ್ತು ಕವನಗಳು
1. ಅವ್ವಾ ನಿನ್ನ ನೆನಪಿನ್ಯಾಗ - ಶಂಕರ ವಿಭಾಳೆ
2. ನಾನು ನಾನಾಗಬೇಕು - ವಿದ್ಯಾ ಡಿ ಕದಂ
3. ಶೂನ್ಯ - ಶ್ರೀಮತಿ ವಾಸಂತಿ ಗಣೇಶ್
4. ಅವಳ ಕನಸಿನ ಕಾಮನಬಿಲ್ಲು - ಪದ್ಮ.ಸಿ
5. ನಾನು ಗೆಲ್ಲುತ್ತೇನೆ - ಶ್ರೀದೇವಿ ಕೆರೆಮನೆ
6. ಅವ್ವ - ರೇಣುಕಾ ಕೋಡಗುಂಟಿ
7. ಸೀತೆಗೊಂದು ಪ್ರಶ್ನೆ - ಅರುಣಾ ಹೆಬ್ರಿ
8. ದೀಪಾವಳಿ - ಶಾರದಮ್ಮ ಕಂಪಾಲಿ
9. ಸ್ವಗತ - ಸರಸ್ವತಿ ಭೂಷಣ್
10. ಮೂರು ಗೊಂಬೆಗಳು- ಸಂಧ್ಯಾ ಎಂ ನಾಯ್ಕ

ರಂಗೋಲಿ ಸ್ಪರ್ಧೆ ಫಲಿತಾಂಶ
ಕ್ರಮ ಸಂಖ್ಯೆ- ಹೆಸರು - ಫಲಿತಾಂಶ
1. ತೇಜಸ್ವಿನಿ - ಪ್ರಥಮ
2. ಪದ್ಮಿನಿ ಮಧುಸೂದನ್ - ದ್ವಿತೀಯ
3. ದೀಪಾ.ಆರ್ - ತೃತೀಯ
4. ಲಕ್ಷ್ಮಮ್ಮ ಇ - ನಾಲ್ಕನೇ
5. ದೀಪನ್ ಕುಮಾರ್ - ಐದನೇ
6. ಪಿ. ರಂಜಿತ - ಆರನೇ
7. ಜ.ಮು.ಚಂದ್ರ - ಏಳನೇ
8. ಆಶಾ - ಎಂಟನೇ
9. ತಿಲಕವತಿ - ಒಂಭತ್ತನೇ
10. ಲಲಿತಾಂಬ ಸಿ.ಆರ್ - ಹತ್ತನೇ
ಗೆರೆಗಳ ರಂಗೋಲಿ
ಶ್ರೀಮತಿ ಲಕ್ಷ್ಮಿ ಜಯರಾಮ್
ಕೆ.ಎಂ.ವೀಣಾ
ಗೀತಾ
ಸುಗುಣ ರಾಮಕೃಷ್ಣ

ಪ್ರಕೃತಿ ಕುರಿತ ನಗರ ಕವನ ಸ್ಪರ್ಧೆ
ಶ್ರೇಣಿ ಕವನ ವಿಜೇತರು -

1. ನಿಸರ್ಗದೇವಿ - ಆರ್.ರಂಗಲಕ್ಷ್ಮಿ - ಪ್ರಥಮ
2. ನವಗಾನ - ಮೃತ್ಯುಂಜಯ ಎಂ.ಸಾಲಿಮಠ್ - ದ್ವಿತೀಯ
3. ಕಾಲ - ರತ್ನಾ ನಾಗರಾಜ್ - ತೃತೀಯ

ಮೆಚ್ಚುಗೆ ಪಡೆದ ಹತ್ತು ಕವನಗಳು:

1. ತೆರೆ ತೆರೆಯ ತೀರದಾನಂದ - ಸುರೇಂದ್ರಕುಮಾರ್
2. ಆಗದಿರಲಿ ಹಿರೋಷಿಮಾ - ಪದ್ಮಾವತಿ ಚಂದ್ರು
3. ಹುಣ್ಣಿಮೆಯ ರಾತ್ರಿ - ಶೈಲದೇವರಾಜ್
4. - ನ.ಹ.ರಾಜು
5. ಪ್ರಕೃತಿ ವಿಕೃತಿ - ಶಾಂತಕುಮಾರ್ ಪೂಜಾರ್
6. ಜಲಲ ಜಲಲ ಜಲಧಾರೆ - ವಿಜಯಲಕ್ಷ್ಮೀ ಎಸ್.ಪಿ
7. ನಳನಳಸಿದೆ ಪ್ರಕೃತಿ - ಜಾಹ್ನವಿ ತೆಕ್ಕುಂಜ
8. ವಿಕೋಪ - ಸಿ.ಲಕ್ಷ್ಮಣ್
9. ಕ್ಷಮಿಸದಿರು ತಾಯಿ - ಗಂಗಾಚಾರಿ
10. ಸ್ವಾತಂತ್ರ್ಯ - ಬಿ.ಎಂ.ನಾಗಭೂಷಣ್

"ಮತ್ತೆ ಮತ್ತೆ ಬೆವರಿನ ಸಿರಿ ಚಿಗುರಲು ಬನ್ನಿ ಕೈ ಜೋಡಿಸಿ"